ಹಕ್ಕುಪತ್ರ ವಿತರಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್..

ಹಕ್ಕುಪತ್ರ ವಿತರಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್..

e-ಸುದ್ದಿ ಇಳಕಲ್

ಇಳಕಲ್: ಕರ್ನಾಟಕ ಸರಕಾರ, ವಸತಿ ಇಲಾಖೆ ಹಾಗು ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಜನಪ್ರಿಯ ಶಾಸಕರಾದ ದೊಡ್ಡನಗೌಡ ಜಿ ಪಾಟೀಲರ ಅಮೃತ ಹಸ್ತದಿಂದ, ನಗರಸಭೆ ಅಧ್ಯಕ್ಷರಾದ ಲಕ್ಷ್ಮಣ ಗುರಂ ಉಪಾಧ್ಯಕ್ಷರಾದ ಸಂತೋಷ ಐಲಿ ಹಾಗು ಸರ್ವಸದಸ್ಯರ ಉಪಸ್ಥಿತಿಯಲ್ಲಿ ಇಲಕಲ್ಲ ನಗರದ ಗುರುಲಿಂಗಪ್ಪಾ ಕಾಲೋನಿ ಗೆಸಂಬಂದಿಸಿದ ೧೨೧ ಕ್ಕೂ ಹೆಚ್ಚು ಹಕ್ಕೂಪತ್ರಗಳನ್ನು ವಿತರಿಸಿದರು.

(ರೂಪಾಯಿ ೬ ಲಕ್ಷ ೮೦ ಸಾವಿರ ಕಟ್ಟಡದ ಅನುದಾನದ ಅವಕಾಶ ದೊಂದಿಗೆ) ಸಂದರ್ಬದಲ್ಲಿ ಹಲವು ವರ್ಷಗಳಿಂದ ಹಕ್ಕುಪತ್ರ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಫಲಾನುಭವಿಗಳು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು. ಶಾಸಕರಾದ ಶ್ರೀ ದೊಡ್ಡನಗೌಡ್ರು ಮಾತನಾಡಿ ಸುಖಾ ಸುಮ್ಮನೆ ಬಡಜನರಿಗೆ ದಾರಿತಪ್ಪಿಸುವವರಿಗೆ ಇಂದು ಸರಿಯಾದ ಉತ್ತರ ಸಿಕ್ಕೆದೆ ಎಂದು ಮಾಡಿದರು.

ಇದೆ ಸಂದರ್ಬದಲ್ಲಿ ಫಲಾನುಭವಿ ಮಹಿಳೆ ಮಾತನಾಡಿ ಹಕ್ಕು ಪತ್ರಗಳನ್ನು ನೀಡುವ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಮಾಡಿ ಆಡಳಿತ ಸದಸ್ಯರುಗಳಿಗೆ ಅವಾಚ್ಯ ಶಬ್ದಗಳಿಂದ ಮಾತನಾಡುವದನ್ನು ಖಂಡಿಸಿ, ಕಮಲ ಕೆಸರಿನಲ್ಲಿದ್ದರು ತುಂಬಾ ಶ್ರೇಷ್ಠ ವಾದ್ದದ್ದು , ಮುಂದಿನ ದಿನಮಾನದಲ್ಲಿ ಕ್ಷೇತ್ರದಲ್ಲಿ ಕಮಲ ಅರಳಿಸಿ ದೊಡ್ಡನಗೌಡ ಜಿ ಪಾಟೀಲರಿಗೆ ಹಾಗು ನಗರಸಭೆ ಸದಸ್ಯರುಗಳಿಗೆ ಇದೆ ಕಾಲೋನಿಯಲ್ಲಿ ಸನ್ಮಾನ ಮಾಡುವದಾಗಿ ಮಾತನಾಡಿದಳು.
ಇ ಕಾರ್ಯಕ್ರಮದಲ್ಲಿ ಸಂಭಂದ ಪಟ್ಟ ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯರುಗಳು ಹಾಗು ಕಾಲೋನಿಯ ಫಲಾನುಭವಿಗಳು ಪಾಲ್ಗೋಂಡಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!