ಸಂಕಲ್ಪ ಫೌಂಡೇಶನ್ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ…

ಸಂಕಲ್ಪ ಫೌಂಡೇಶನ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ…

 

e-ಸುದ್ದಿ ಇಳಕಲ್

ಇಳಕಲ್: ಸಂಕಲ್ಪ ಫೌಂಡೇಶನ್ ವತಿಯಿಂದ 74ನೇ ಗಣರಾಜ್ಯೋತ್ಸವ ಅಂಗವಾಗಿ ಸಾಧನೆಗೈದ ಸಾಧಕರಿಗೆ ವಿಶೇಷ ಸನ್ಮಾನ ಸಮಾರಂಭ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನ ದಲ್ಲಿ ಕಾರ್ಯಕ್ರಮ
ನಡೆಯಿತು.

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಡಾ. ಗುರುಮಹಾಂತ ಸ್ವಾಮಿಗಳು, ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಗಳು ಸಿದ್ದನ ಕೊಳ್ಳ, ದ ಶ್ರೀಗಳು ಸಾನಿಧ್ಯವನ್ನು ಅಲಂಕರಿಸಿದ್ದರು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಯನ್ನು ಶಾಸಕ ದೊಡ್ಡನಗೌಡ ಜಿ ಪಾಟೀಲ್ ನೆರವೇರಿಸಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸಂಕಲ್ಪ ಪೌಂಡೇಶನ್ ನ ಲೋಗೋ ಬಿಡುಗಡೆಗೊಳಿಸಿದರು.
ನಂತರ ಶಿಕ್ಷಣ, ವೈದ್ಯಕೀಯ,ಕೃಷಿ, ನೇಕಾರಿಕೆ, ಪತ್ರಿಕಾ, ಕೃಷಿ, ಕ್ರೀಡೆ ಹಾಗೂ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ವರೆಗೆ ವಿಶೇಷ ಸನ್ಮಾನ ನಡೆಯಿತು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮಣ ಗುರಂ ಉಪಾಧ್ಯಕ್ಷ ಸಂತೋಷ ಐಲಿ.ಮಾಜಿ ನಗರಸಭೆ ಅಧ್ಯಕ್ಷ ಶೋಭಾ ಆಮದಿಹಾಳ. ಮಾಜಿನಗರಸಭೆ ಸದಸ್ಯೆ ಮಂಜುನಾಥ ಹೊಸಮನಿ.ಹಾಗೂ ಬಿಜೆಪಿ ನಗರಮಂಡಲ ಅಧ್ಯಕ್ಷ ಅರವಿಂದ ಮಂಗಳೂರು.
ಮತ್ತು ಬಿಜೆಪಿ ಮುಖಂಡ ವಿಠ್ಠಲ ಜಕ್ಕಾ. ಅಶೋಕ ಚಲವಾದಿ.
ಓ ಕಾರ್ಯಕ್ರಮದಲ್ಲಿ ಸಂಕಲ್ಪ ಫೌಂಡೇಶನ್ ನ ಅಧ್ಯಕ್ಷ ಹನುಮಂತ ನಾರಾಯಣಿ, ರಾಘವೇಂದ್ರ ಧಾರವಾಡ, ಪೂಜಾರಿ, ವೀರಣ್ಣ ಪತ್ತಾರ, ರಾಜು ಚಲವಾದಿ ಹಾಗೂ ಫೌಂಡೇಶನ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

Don`t copy text!