e-ಸುದ್ದಿ, ಮಸ್ಕಿ
ಅಮಸ್ಕಿ:ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆ ಹಾಗೂ ಆರ್.ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ಪೂರ್ವ ಸಿದ್ದತೆಯನ್ನು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಪರಿಶೀಲಿಸಿದರು.
ಪಟ್ಟಣದ ಪೊಲೀಸ್ ಠಾಣೆ ಕಚೇರಿಯ ಪಕ್ಕದ ಬಯಲು ಜಾಗದಲ್ಲಿ ನ.23 ಸೋಮವಾರ ದಂದು ಜರುಗಲಿರುವ ಬಹಿರಂಗ ಸಭೆಯ ಸಿದ್ದತೆ ವಿಕ್ಷೀಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಸ್ಕಿ ಉಪಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಸಕಲ ಸಿದ್ದತೆಯಲ್ಲಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾರ್ಯಧ್ಯಕ್ಷರುಗಳು, ರಾಜ್ಯದ ಮುಂಚುಣಿ ನಾಯಕರು ಭಾಗವಹಿಸಲಿದ್ದಾರೆ.
ಬಿಜೆಪಿಯವರು ಚುನಾವಣೆಗಳು ಹೇಗೆ ಎದರಿಸುತ್ತಾರೆಂಬುದು ಎಲ್ಲರಿಗೂ ಗೊತ್ತು. ಆದರೆ ಮಸ್ಕಿ ಕ್ಷೇತ್ರದಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ನೋಡಿದರೆ ಈ ಭಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದು ಬಯ್ಯಾಪುರ ತಿಳಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಆರೂ ವರ್ಷ ಕಳೆದಿವೆ ಅಕೌಂಟಿಗೆ 4ಸಾವಿರ ಹಣ ಹಾಕಿದ್ದು ಬಿಟ್ಟರೆ ಇವರ ಸಾಧನೆ ಏನು ಎಂದರು. ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮಸ್ಕಿ ಉಪಚುನಾವಣೆ ದಿಕ್ಸೂಚಿಯಾಗಲಿದೆ. ಇತ್ತೀಚಿನ ಉಪ ಚುನಾವಣೆಯಿಂದ ಕಾಂಗ್ರೆಸ್ ಕುಂದಿಲ್ಲ. ಬದಲಿಗೆ ಹುಮಸ್ಸು ಹೆಚ್ಚಾಗಿದೆ ಎಂದು ಬಯ್ಯಾಪುರ ತಿಳಿಸಿದರು.
ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಜಿ.ಪಂ.ಮಾಜಿ ಸದಸ್ಯ ಎಚ್,ಬಿ,ಮುರಾರಿ, ತಾ.ಪಂ.ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ, ಬಸನಗೌಡ ಮುದಬಾಳ, ಚಾಂದ್‍ಪಾಶ ಶೇಡ್ಮೀ ಸೇರಿದಂತೆ ಇನ್ನಿತರರು ಇದ್ದರು.