ಪಾರಿಜಾತ ತವರಿನ ದೊರೆ
ಮೂಡಣದಿ ಸೂರ್ಯನು ನಿನಗಾಗಿ ಮೂಡಲು
ವಾದ್ಯವೃಂದಗಳು ನಿನ್ನ ನಾಮವನೇ ನುಡಿಯಲು
ಬಲಭೀಮಾ ಹರಸು ಬಾ
ಕುಲಗೋಡದ ದೊರೆಯೇ
ಭಕ್ತ ಕೋಟಿಗೆ ನಿನ್ನ ದರುಶನವ ನೀಡು ಬಾ .

ಉದ್ಭವ ಮೂರುತಿಯಾಗಿ
ಹೊರಹೊಮ್ಮಿದ ಧೀರನೆ
ಈ ಸ್ಥಳವೇ ಬೇಕೆಂದು ನೆಲೆಯೂರಿ ನಿಂತವನೆ
ದರುಶನ ಮಾತ್ರದಿ ಭವ ರೋಗ ಕಳೆದವನೇ ಭಕ್ತ ಕೋಟಿಗೆ ನಿನ್ನ ದರುಶನವ ನೀಡು ಬಾ

ಪಾರಿಜಾತದ ತವರು
ಇದು ಎಲ್ಲ ಕಲೆಗಳ ಉಸಿರು
ಐದು ಸುತ್ತಿನ ಅದ್ಭುತ ಪಲ್ಲಕ್ಕಿಯ ಉತ್ಸವವು
ಭಕ್ತಿ ಭಾವದ ಸೂತ್ರದ ಈ ತೇರು
ಭಕ್ತಕೋಟಿಗೆ ನಿನ್ನ ದರುಶನವನೀಡು ಬಾ

ಹರ್ಷೋದ್ಘಾರದ ಕೂಗು ಮುಗಿಲು ಮುಟ್ಟಿರಲು
ಎಲ್ಲರನು ಹರಸಿ ನೀ ಸಾಕಿ ಸಲುಹುತಲಿರಲು
ಜಗದೊಡೆಯಾ ನೀನೊಲಿದ ಈ ನೆಲ ಜಲವು ಪಾವನವಾಗಿರಲು
ಭಕ್ತ ಕೋಟಿಗೆ ನಿನ್ನ ದರುಶನವ ನೀಡು ಬಾ

ರಚನೆ:ಶ್ರೀಕಾಂತ. ಅಮಾತಿ ಮುಂಬಯಿ

Don`t copy text!