ಕಟ್ಟೋಣ ಬನ್ನಿ

ಕಟ್ಟೋಣ ಬನ್ನಿ
ಹೊಸ ರಾಮರಾಜ್ಯವ
ಬಿತ್ತೋಣ ಬನ್ನಿ
ಹೊಸ ಭಾವೈಕ್ಯತೆಯ ಬೀಜವ

ನಾವು ಬೇರೇ ನೀವೇ ಬೇರೇ
ಎನ್ನುವುದು ಬಿಡೋಣ
ನಾವೆಲ್ಲ ಹಿಂದೂಗಳು
ಎಂದು ಸಾರೋಣ

ಹಿಂದೆ ಭಾರತದ
ಭವ್ಯ ಪರಂಪರೆಯ
ಸಾರಿದ ಶಿವಾಜಿ
ಚಂದ್ರಗುಪ್ತ ಮೌರ್ಯ
ಅಶೋಕ, ಕೃಷ್ಣದೇವರಾಯ
ಹಕ್ಕ ಬುಕ್ಕರ ನೆನೆಯೋಣ

ರಾಣಾ ಪ್ರತಾಪಸಿಂಗ್
ಭಗತಸಿಂಗ,ಪೌರಸ,
ವೀರ ಸಾವರ್ಕರ್
ಮುಂತಾದ ಕಲಿಗಳ
ನೆನೆಯೋಣ

ಭವ್ಯ ಪರಂಪರೆಯ
ಮತ್ತೆ ಬೆಳಗೋಣ
ಮತ್ತೆ ಹಿಂದೂ ಧ್ವಜ
ಎತ್ತರೆತ್ತರಕ್ಕೆ ಹಾರಲಿ
Lನಮ್ಮ ಉನ್ನತ
ಶಿಕ್ಷಣ ವ್ಯವಸ್ಥೆ,
ಬುದ್ಧಿಮತ್ತೆಯ
ಆಡಳಿತವ
ಮರುಸ್ಥಾಪಿಸೋಣ

ಬನ್ನಿ ಎಲ್ಲರೂ
ಒಂದಾಗೋಣ
ಭ್ರಾತೃತ್ವದ ಭಗಿನಿತ್ವದ
ಬೀಜ ಬಿತ್ತೋಣ

ಜೈ ಹಿಂದ್, ಜೈ ಹಿಂದ್ 🙏🏼🙏🏼

✍️ರೇಖಾ. ಮುತಾಲಿಕ್

Don`t copy text!