ಸೂರ್ಯನ ಸತ್ಪಥವು
ಬೆಲ್ಲ ಬೇಳೆಯು ಸೇರಿ ಹೋಳಿಗೆ ಆದಂತೆ
ಎಳ್ಳು ಬೆಲ್ಲವು ಸೇರಿ ಒಳ್ಳೆಯ ನುಡಿಯಂತೆ|
ಶರಣರಾ ಸ್ಮರಣೆ ಭವರೋಗ ಕಳೆವಂತೆ
ವೈಚಾರಿಕ ಕ್ರಾಂತಿ ಮೌಢ್ಯತೆಯ ತೊಡೆವಂತೆ|
ಸಜ್ಜನರ ನುಡಿಯು ಸಾತ್ವಿಕದ ಒಡಲಂತೆ
ಧರ್ಮದಾ ನಡೆಯು ತಾತ್ವಿಕದ ಕಡಲಂತೆ|
ರೈತನಾ ಬೆವರು ಮುತ್ತಾಗಿ ಸುರಿವಂತೆ
ಕಳೆತೆಗೆದು ಬೆಳೆಬೆಳೆದು ಹೊನ್ನುಗ್ಗಿ ಆದಂತೆ|
ರೈತನಾ ಕಸುವು (ಶಕ್ತಿ) ಹಸಿವು ನಿಗಿಸಿದಂತೆ
ನೆನೆಯೋಣ ನಿತ್ಯವೂ ದೇವರಾ ನೆನೆವಂತೆ|
ಎಳೆಯ ಕಂದಮ್ಮಗಳ ನಗುಉಕ್ಕಿ ಹರಿವಂತೆ
ಬೆಳೆದ ಬೆಳೆಯೆಲ್ಲಾ ಹೊನ್ನಾಗಿ ಹರಿವಂತೆ|
ಬಸವನಾ ಕ್ರಾಂತಿಯು ಹೊಸಯುಗವ ಬರೆದಂತೆ
ತೊತ್ತಾಗಿ ದುಡಿಯುವಾ ಎತ್ತುಗಳ ನೆನೆವಂತೆ|
ಸೂರ್ಯನ ಸತ್ಪಥವು ಸಂಕ್ರಾಂತಿಯಾದಂತೆ
ಸಮೃದ್ಧಿತರುವಾ ಸಂಕೇತದಂತೆ |
–ಸವಿತಾ ಮಾಟೂರು, ಇಳಕಲ್