ಗೌಡೂರು ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ 2022-23 ನೇ ಸಾಲಿನ ಕಲಿಕಾ ಹಬ್ಬಕ್ಕೆ ಚಾಲನೆ

ಗೌಡೂರು ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ 2022-23 ನೇ ಸಾಲಿನ ಕಲಿಕಾ ಹಬ್ಬಕ್ಕೆ ಚಾಲನೆ

 

ವರದಿ ವೀರೇಶ ಅಂಗಡಿ ಗೌಡೂರು

ಸಮಗ್ರ ಶಿಕ್ಷಣ,ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಯರಮರಸ್ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಲಿಂಗಸುಗೂರು ಸಮೂಹ ಸಂಪನ್ಮೂಲ ಕೇಂದ್ರ ಗೌಡೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಗೌಡೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಗೌಡೂರು ವಲಯ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ 2022-23 ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಮಾದರಿ ರಾಕೆಟ್ ಉಡಾವಣೆ ಮಾಡುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲ ತಳೀರು,ತೊರಣಗಳಿಂದ ಶೃಂಗರಿಸಿದ ಟ್ರಾಕ್ಟರ್ ನಲ್ಲಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಹಾಗೂ ದೇಶದ ಮೊದಲು ಮಾಹಿಳಾ ಶ್ರೀ ಮತಿ ಸಾವಿತ್ರಿ ಬಾಯಿ ಪೂಲೆಯವರ ಭಾವ ಚಿತ್ರಗಳ ಮೆರವಣಿಗೆ ಹಾಗೂ ಎತ್ತಿನ ಬಂಡಿಯಲ್ಲಿ ದೇಶದ ಮಹಾನ್ ವ್ಯಕ್ತಿಗಳ ಛದ್ಮ ವೇಶ ತೊಟ್ಟಿರುವ ಮಕ್ಕಳನ್ನು ಕೂರಿಸುವದರೊಂದಿಗೆ ಭಾಜ-ಭಜಂತ್ರಿ, ಡೊಳ್ಳು ಕುಣಿತ, ಬಜಾನಾ ಮೇಳಗಳು, ಕುಂಬ ಹೊತ್ತು ಸಾಗಿದ ಶಾಲಾ ಮಕ್ಕಳು, ಲಂಬಾಣಿ ವೇಷಭೂಷಣಗಳೊಂದಿಗೆ ಲಂಬಾಣಿ ಮಹಿಳೆಯರು ಮಾಡಿದ ನೃತ್ಯದ ದೃಶ್ಯಗಳು ನೋಡುಗರ ಕಣ್ಮನ ಸೆಳೆದವು.

ಕಾರ್ಯಕ್ರಮನ ಉದ್ದೇಶಿಸಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಗೌಡರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಣ ಇಲಾಖೆಯ ಆದೇಶದಂತೆ ಕಲಿಕಾ ಹಬ್ಬ ಕಾರ್ಯಕ್ರಮವು ಹಬ್ಬದ ಕಡೆ ಇಂದು ನೆರವೇರಿದ್ದು ಗ್ರಾಮಸ್ಥರ ಸಹಕಾರದೊಂದಿಗೆ ತುಂಬಾ ಅಚ್ಚುಕಟ್ಟಾಗಿ ಏರ್ಪಡಿಸಲಾಗಿದ್ದು ಮಕ್ಕಳ ಕಲಿಕೆಯ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮ ಜಾರಿಗೆ ತರಲಾಗಿದ್ದು ಕಾರ್ಯಕ್ರಮದ ಆಶಯದಂತೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.

ಬಿ. ಆರ್‌.ಸಿ ಕೋ ಆರ್ಡಿನೆಟ್ ಆದ ಹನುಮಂತಪ್ಪ ಕುಳಗೇರಿ ಅವರು ಮಾತನಾಡಿ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಇಂದು ಗ್ರಾಮಸ್ಥರು ಒಂದು ಜಾತ್ರೆಯಂತೆ ಆಚರಣೆ ಮಾಡಿದ್ದು ನೋಡಿ ಮನಸ್ಸಿಗೆ ತುಂಬಾ ಖುಷಿಯಾಯಿತು. ಪಾಲಕರು ಮಕ್ಕಳ ಆಸೆಯಂತೆ ಅವರ ಕಲಿಕೆಗೆ ಹೆಚ್ಚಿನ ಒತ್ತನ್ನು ಕೊಡಬೇಕು. ಮಕ್ಕಳ ಪ್ರಶ್ನೆಗಳನ್ನು ಮಾಡಿದಾಗ ಗದರಿಸಿದ ಅವುಗಳಿಗೆ ಉತ್ತರವನ್ನು ಕಂಡುಹಿಡಿಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ವಿವಿಧ ಶಾಲೆಯ ಮಕ್ಕಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರು ,ಗ್ರಾಮ ಪಂಚಾಯತಿ ಅಧ್ಯಕ್ಷರು ಸರ್ವ ಸದಸ್ಯರು ,ಎಸ್ಡಿಎಂಸಿ ಅಧ್ಯಕ್ಷರು ಸದಸ್ಯರು, ಗ್ರಾಮದ ಪಾಲಕರು ಹಿರಿಯ ಮುಖಂಡರು ಶಾಲಾ ಮಕ್ಕಳು ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಗವಿಸಿದ್ದ ಭಜಂತ್ರಿ ನೆರವೇರಿಸಿದರು.

Don`t copy text!