ನಂದವಾಡಗಿ ಶ್ರೀಮಠದಲ್ಲಿ ರಕ್ತದಾನ ಶಿಬಿರ, ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಡಾ. ಚನ್ನಬಸವ ದೇವರು..
e-ಸುದ್ದಿ ಇಳಕಲ್
ಇಳಕಲ್ ತಾಲೂಕಿನ ಸುಕ್ಷೇತ್ರ ನಂದವಾಡಗಿಯ ಶ್ರೀಮಠದಲ್ಲಿ ಪರಮಪೂಜ್ಯ ಶ್ರೀ ತಪೋನಿದಿ ಷ, ಬ್ರ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಹಸ್ರ ಚಂದ್ರದರ್ಶನ ಹಾಗೂ ಪೂಜ್ಯಶ್ರೀ ಡಾ. ಚನ್ನಬಸವ ದೇಸಿ ಕೇಂದ್ರರು ಇವರ ಗುರು ಪಟಾಧಿಕಾರ ಮಹೋತ್ಸವದ ಅಂಗವಾಗಿ
ಶ್ರೀ ವಿಜಯ ಮಹಾಂತ ರಕ್ತ ಕೇಂದ್ರ ಇವರ ಸಹಯೋಗದಲ್ಲಿ
ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಪೂಜ್ಯರಿಗೆ ರಕ್ತದಾನ ತುಲಾಭಾರ ಕಾರ್ಯಕ್ರಮದ ನಿಮಿತ್ಯ ರಕ್ತದಾನ ಶಿಬಿರ ನಡೆಯಿತು.
ಈ ಶಿಬಿರದ ಕುರಿತು ಇಲ್ಕಲ್ ನಗರದ ಖ್ಯಾತ ವೈದ್ಯ ಮಹಾಂತೇಶ್ ಕಡಪಟ್ಟಿ ಅವರು ರಕ್ತದಾನದ ಮಹತ್ವವನ್ನು ಜನರಿಗೆ ತಿಳಿಯಪಡಿಸಿದರು.
ಶ್ರೀ ಮಠದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ನಂದ್ವಾಡಗಿ ಗ್ರಾಮದ ಎಲ್ಲಾ ಯುವಕರು, ಮಹಿಳೆಯರು ಸುಮಾರು 150ಕ್ಕೂ ಹೆಚ್ಚು ಜನ ರಕ್ತದಾನ ಮಾಡುವ ಮೂಲಕ ಭಕ್ತಿ ಮೆರೆದರು.
ವರದಿಗಾರರು: ಶರಣಗೌಡ ಕಂದಕೂರ.