ಡಾ. ಚನ್ನಬಸವದೇಶಿಕೇಂದ್ರರ ಪಠ್ಠಾಧಿಕಾರ ಕಾರ್ಯಕ್ರಮ ಉದ್ಘಾಟಿಸಿದ ಸುತ್ತೂರು ಶ್ರೀಗಳು….

ಡಾ. ಚನ್ನಬಸವದೇಶಿಕೇಂದ್ರರ ಪಠ್ಠಾಧಿಕಾರ ಮಹೋತ್ಸವದ  ಕಾರ್ಯಕ್ರಮ ಉದ್ಘಾಟಿಸಿದ ಸುತ್ತೂರು ಶ್ರೀಗಳು….

e-ಸುದ್ದಿ ವರದಿ , ನಂದವಾಡಗಿ

ಇಳಕಲ್ಲ  ತಾಲೂಕಿನ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠ ಆಳಂದ-ನಂದವಾಡಗಿ-ಜಾಲವಾದಿ, ಪರಂ ಪೂಜ್ಯ ಷ.ಬ್ರ. ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಹಸ್ರ ಚಂದ್ರ ದರ್ಶನ ಪೂಜ್ಯ ಶ್ರೀ ಡಾ. ಚನ್ನಬಸವದೇಶಿಕೇಂದ್ರರು ಇವರ ಪಠಾಧಿಕಾರ ಮಹೋತ್ಸವದ ಅಂಗವಾಗಿ ಇಂದು ನಂದವಾಡಗಿ ಶ್ರೀಮಠದಲ್ಲಿ ನಡೆದ ಮಹಾದಾಸೋಹಿ ಶ್ರೀ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಮಹಾಮಂಡಲ ಹಾಗೂ ಶ್ರೀ ಮಹಾಂತೇಶ್ವರ ಪುರಾಣ ಗ್ರಂಥ ಬಿಡುಗಡೆ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀಕ್ಷೇತ್ರ ವೀರ ಸಿಂಹಾಸನ ಮಹಾಸಂಸ್ಥಾನ ಸುತ್ತೂರ ಮಠದ ಪರಂ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಹುಕ್ಕೇರಿ ಮಠದ ಶ್ರೀ ನಿ.ಪ್ರ ಸದಾಶಿವ ಮಹಾಸ್ವಾಮಿಗಳು ವಹಿಸಿದ್ದರು ಈ ಸಂದರ್ಭದಲ್ಲಿ ಶ್ರೀಗಳು ಪರಂ ಪೂಜ್ಯ ಷ.ಬ್ರ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು* ಹಾಗೂ ನಾಡಿನ ಇತರೆ ಶ್ರೀಮಠಗಳ ಪರಂ ಪೂಜ್ಯರು ಸಾನಿಧ್ಯವನ್ನು ವಹಿಸಿದ್ದರು.

ಅದೇ ರೀತಿ ಶಾಸಕ ದೊಡ್ಡನಗೌಡ ಪಾಟೀಲ್ ,ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಅಮರೇಗೌಡ ಬಯ್ಯಾಪೂರ ಹಾಗೂ ಗ್ರಾಮದ ಮಹಿಳೆಯರು, ಗುರುಹಿರಿಯರು ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!