ನಿಸರ್ಗ ಪೂಜೆಯೇ ಸಾವಯವ ಕೃಷಿ ಸಿದ್ದೇಶ್ವರ ಶ್ರೀ
e-ಸುದ್ದಿ ಬೈಲಹೊಂಗಲ
ಪ್ರಕೃತಿಯ ಅಣು ಅಣುವಿನಲ್ಲಿಯೂ ಭಗವಂತನಿದ್ದಾನೆ. ಸಕಲ ಜೀವಿಗಳಿಗೆ ಭಗವಂತ ಕೊಟ್ಟಿರುವ ಅಮೂಲ್ಯ ಕೊಡುಗೆ ಈ ನಿಸರ್ಗ. ಪ್ರತಿಯೊಂದು ಜೀವಿಗಳು ನೈಸರ್ಗಿಕ ಗುಣಗಳಲ್ಲಿಯೇ ಬದುಕಿ ಭಗವಂತನಿಗೆ ಕೃತಜ್ಞರಾಗಿದ್ದಾರೆ. ಮಾನವ ಮಾತ್ರ ಲಾಭಕ್ಕೋಸ್ಕರ ಪ್ರಕೃತಿಯನ್ನು ರಾಸಾಯನಿಕ ಗೊಬ್ಬರ ಗಳಿಂದ ವಿಕೃತಗೊಳಿಸುತ್ತಿದ್ದಾನೆ. ನಿಸರ್ಗದತ್ತ ಕೊಡುಗೆಯನ್ನು ಸಾವಯವ ಕೃಷಿಯಿಂದ ನೈಸರ್ಗಿಕವಾಗಿ ಉಪಯೋಗಿಸಿಕೊಂಡು ವಿಷಮುಕ್ತ ದವಸ ಧಾನ್ಯಗಳ ಉತ್ಪಾದನೆಯೇ ನಿಜವಾದ ಭಗವಂತನ ಪೂಜೆ ಎಂದು ಸಿದ್ದೇಶ್ವರ ಶ್ರೀಗಳು ಹೇಳಿದ ಮಾತುಗಳೇ ನನಗೆ ಪ್ರೇರಣೆಯಾಗಿ ಸಾವಯವ ಕೃಷಿಕನಾದೆ ಲಾಭಾಂಶವನ್ನು ಲೆಕ್ಕಿಸದೆ ವಿಷಮುಕ್ತ ಆಹಾರ ಉತ್ಪಾದನೆ ಗುರಿ ಸಾವಯವ ಕೃಷಿಕನದಾಗಬೇಕು ಗಳಿಕೆ ಉಳಿಕೆ ನಿಧಾನವಾದರೂ ಮನುಕುಲಕೆ ಒಳ್ಳೆಯದನ್ನೇ ಮಾಡಿದ್ದೇನೆ ಎಂಬ ತೃಪ್ತಿ ಕೃಷಿಕನಿಗಿರಲಿ ಎಂದು ವಿಜಯ ಕರ್ನಾಟಕ ಪತ್ರಿಕೆಯವರು ಕೊಡ ಮಾಡುವ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ಆನಂದ ವಾಲಿ ಹೇಳಿದರು.
ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿರುವ ಸಿದ್ದೇಶ್ವರ ನುಡಿ ನಮನ, ಆಧುನಿಕ ಸ್ವರಚಿತ ವಚನ ಗೋಷ್ಠಿ ಸಮಾರಂಭದಲ್ಲಿ ವಿಜಯ ಕರ್ನಾಟಕ ದಿನ ಪತ್ರಿಕೆಯವರು ಕೊಡ ಮಾಡುವ ಶ್ರೇಷ್ಠ ಕ್ರಷಿಕ ಪ್ರಶಸ್ತಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ಬಸವರಾಜ ಮಹಂತಶೆಟ್ಟಿಯವರು ಸಮಯ ಪಾಲನೆಯ ನಾವು ಸಿದ್ದೇಶ್ವರರಿಗೆ ಸಲ್ಲಿಸು ಗೌರವ ಎಂದರು. ರಾಜು ಬರಮಗೌಡರ ಶ್ರೀಗಳ ಸಾಂದರ್ಭಿಕ ಪ್ರವಚನಗಳು ಪುಸ್ತಕ ವಿತರಿಸಿ ಸಿದ್ದೇಶ್ವರ ಶ್ರೀಗಳು ನಮ್ಮನ್ನು ಅಗಲಿಲ್ಲ ಪುಸ್ತಕ ರೂಪದಲ್ಲಿ ಇದ್ದಾರೆಂದು, ಬಾಲ್ಯದಿಂದಲೂ ಅವರ ಜೊತೆಗೆ ಒಡನಾಡಿದ ಅನುಭವಗಳನ್ನು ಹಂಚಿಕೊಂಡರು ಪ್ರತಿ ಕಾಯಕ ಯೋಗವಾಗಬೇಕೆಂಬುದು ಶ್ರೀಗಳ ಸಂಕಲ್ಪ ವಾಗಿತ್ತು ಶ್ರೇಷ್ಠ ಕಾಯಕ ಸಾವಯವ ಕೃಷಿ ವಿಷ ಮುಕ್ತ ಆಹಾರ ಉತ್ಪಾದನೆ ಗಳಿಗೆ ಬೈಲಹೊಂಗಲದ ವಿದ್ಯಾನಗರ ಹಾಗೂ ಮುರುಗೋಡ ರಸ್ತೆಯ ಬಸವನಗರದಲ್ಲಿ ಮಾರುಕಟ್ಟೆ ಒದಗಿಸಲಾಗಿದೆ ಎಂದು ವಿಜಯ ಪತ್ತಾರ ಮಾತನಾಡಿದರು.
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ತಾಲೂಕ ಘಟಕದ ಅಧ್ಯಕ್ಷ ಪ್ರೇಮಕ್ಕ ಅಂಗಡಿ ಮಾತನಾಡಿ ಹೇಳುವುದೆಲ್ಲ ಹೇಳಿದ್ದಾಗಿದೆ ನಡೆಯುವುದು ಮಾತ್ರ ಬಾಕಿ ಇದೆ ಎಂದರು.
ಹಿರಿಯ ಸಾಹಿತಿಗಳಾದ ಬಿ ವಿ ನೇಸರಗಿ ಪಕೀರ ನಾಯ್ಕ್ ಗಡ್ಡಿಗೌಡರ ಮಲ್ಲಮ್ಮ ಪಾಟೀಲ್ ಮಹಾಂತೇಶ್ ಮುದುಕನಗೌಡ ಕಾಡಪ್ಪ ರಾಮಗುಂಡಿ ಅಮಜವ್ವ ಭೋವಿ ಸಾವಿತ್ರಿ ಹೊತ್ತಿಗೆಮಠ ಗಂಗಯ್ಯ ಮನವಳ್ಳಿಮಠ ಅನ್ನಪೂರ್ಣ ಕನೋಜ ಚಂದ್ರಶೇಖರ ಕೊಪ್ಪದ ಗೋದಾವರಿ ಪಾಟೀಲ್ ಮಹಾಂತೇಶ ರಾಜಗೋಳಿ ವಚನ ವಾಚಸಿ ಶ್ರೀಗಳಿಗೆ ನಮನ ಸಲ್ಲಿಸಿದರು.
ಪುರಸಭೆ ಸದಸ್ಯ ಅರ್ಜುನ ಕಲಕುಟಕರ ದುಂಡಯ್ಯ ಕುಲಕರ್ಣಿ ಬಸವರಾಜ್ ಮುಳಕೂರ್ ಶಿವಲೀಲಾ ಹುಲಿಕಟ್ಟಿ ನಿರ್ಮಲ ಕಲ್ಬುರ್ಗಿ ಗಿರಿಜಾ ಕಡಬಿ ಡಾ.ಬಸವರಾಜೇಶ್ವರಿ ಹೆಸರುಗುಂಡಿ ಶರಣ ಸಾಹಿತ್ಯ ಪರಿಷತ್ ಕದಳಿ ಮಹಿಳಾ ವೇದಿಕೆ ಅಜಗಣ್ಣ ಮುಕ್ತಾಯಕ್ಕ ಬಳಗ ಪತ್ರಿ ಬಸವ ನಗರ ಅಭಿವೃದ್ಧಿ ಸಂಘ ಪದಾಧಿಕಾರಿಗಳು ಹಾಗೂ ಪಟ್ಟಣದ ಹಲವಾರು ಶರಣ ಶರಣರು ಭಾಗಿಯಾಗಿದ್ದರು ಗೀತಾದೇವಿ ಬೇವಿನಗಿಡದ ನಮನಾಂಜಲಿ ಸಲ್ಲಿಸಿ ಪ್ರಾರ್ಥಿಸಿದರು ಪ್ರೀತಿ ತುಳಸನ್ನವರ್ ಸ್ವಾಗತಿಸಿದರು ಗೀತಾ ಅರಳಿಕಟ್ಟಿ ವಂದಿಸಿದರು ರಾಜೇಶ್ವರಿ ದ್ಯಾಮನಗೌಡ ನಿರೂಪಿಸಿದರು ಮಸ್ತನ್ನವರ ಬಂಧುಗಳು ಪ್ರಸಾದ ಸೇವೆ ಗೈದರು.