ಸಾರ್ವಜನಿಕ ಉದ್ಯಾನ ವನ ಲೋಕಾರ್ಪಣೆ

 

ವರದಿ -ವೀರೇಶ ಅಂಗಡಿ ಗೌಡೂರು

ಲಿಂಗಸುಗೂರು ತಾಲ್ಲೂಕಿನ ಕರಡಕಲ್ ಕೆರೆಯ ಮೇಲೆ ನಿರ್ಮಿಸಿದ ಸಾರ್ವಜನಿಕ ಉದ್ಯಾನವನದ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ರಾಯಚೂರು ಕೊಪ್ಪಳ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ ಶಾಸಕ ಡಿ.ಎಸ್.ಹುಲಿಗೇರಿ ಮತ್ತು ತಮ್ಮ ಸಹಕಾರದಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೂ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯವಾಗಿದೆ ಎಂದರು

.ಶಾಸಕರು   ಪಟ್ಟಣ ಸೌಂದರ್ಯಕ್ಕೆ ಕೊಡುಗೆಯಾಗಿ ಈ ಉದ್ಯಾನವನ್ನು ನಿರ್ಮಿಸಿದ್ದಾರೆ .ಉದ್ಯಾನವನದ ಸ್ವಚ್ಛತೆ, ಅಂದವನ್ನು ಕಾಪಾಡಿಕೊಂಡು ಸುಂದರ ಉದ್ಯಾನ ವನದ ಸದುಪಯೋಗ ಪಡಿಸಿಕೊಂಡು ಹೋಗಬೇಗಾಕಿರುವದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದರು.

ಶಾಸಕ ಡಿ.ಎಸ್.ಹುಲಿಗೇರಿ ಮಾತನಾಡಿ ತಮ್ಮ ಅಧಿಕಾರ ಅವಧಿಯಲ್ಲಿ ಕ್ಷೇತ್ರದಾದ್ಯಂತ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ತೃಪ್ತಿ ಇದೆ.ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಂದ ಚುನಾಯಿತರಾದ ನಾವು ಕ್ಷೇತ್ರದ ಜನ ಸಾಮಾನ್ಯರ ಸೇವಕರಾಗಿ ಕೆಲಸ ಮಾಡುವವರು .ನನ್ನ ರಾಜಕೀಯ ಗುರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಆಶಯದಂತೆ
ಶಿಕ್ಷಣ, ರಸ್ತೆ , ಕುಡಿಯುವ ನೀರು, ವಿವಿಧ ವಸತಿ ನಿಲಯಗಳು, ಆಸ್ಪತ್ರೆಗಳು, ವಸತಿ ಶಾಲೆಗಳು ಸೇರಿದಂತೆ ಕ್ಷೇತ್ರದ ಎಲ್ಲಾ ಭಾಗಗಳಲ್ಲಿ ಜನಮೆಚ್ಚುವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆನೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು 2023 ರ ಚುನಾವಣೆಯಲ್ಲಿ ಮತ್ತೋಮ್ಮೆ ಆಶಿರ್ವದಿಸಬೇಕೆಂದು ಮನವಿ ಮಾಡಿದರು.

ಪಟ್ಟಣ ನಾಗರಿಕರ ಬಹು ದಿನಗಳ ಬೇಡಿಕೆಯಾದ ಸಾರ್ವಜನಿಕ ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಉದ್ಘಾಟಿಸಿದ್ದು ತೃಪ್ತಿ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲಿ ಎಲ್.ಇ.ಡಿ ಪರದೆಯ ಮೇಲೆ ಲಹರಿ ಕ್ರಿಯೇಶನ್ಸ್ ರವರ ಧ್ವನಿಯಲ್ಲಿ ಮೂಡಿಬಂದ ಶಾಸಕರ ಅವಧಿಯಲ್ಲಿ ಆದಂತಹ ಅಭಿವೃದ್ಧಿ ಕಾರ್ಯಗಳ ಸಾಕ್ಷ್ಯ ಚಿತ್ರಗಳ ಅನಾವರಣ ಮಾಡಲಾಯಿತು.

ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ಗುತ್ತಿಗೆದಾರರಾದ ಅಮರಗುಂಡಪ್ಪ ಮೇಟಿ ಉಪಾಧ್ಯಕ್ಷ ಎಂ.ಡಿ ರಫಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗಾದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಕುಮಾರ್, ಪುರಸಭೆ ಸದಸ್ಯರು ಸೇರಿದಂತೆ ಹಲವು ರಾಜಕೀಯ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ಗಂಗಾವತಿ ಪ್ರಾಣೇಶ್ ಅವರ ತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು. ಹಾಸ್ಯ ದಿಗ್ಗಜರಾದ ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ, ಬಸವರಾಜ ಮಹಾಮನಿ, ರಾಘವೇಂದ್ರ ಆಚಾರ್ಯ ಅವರು ಕಿಕ್ಕಿರಿದು ತುಂಬಿದ್ದ ಜನ ಸಾಗರವನ್ನು ನಗೆಗಡಲಲ್ಲಿ ತೆಲಾಡಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಚಿದಾನಂದ ಅವರು ಮಾಡಿದರು.

Don`t copy text!