ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಸಂಸದರಿಂದ ಮನವಿ.
ವರದಿ ವೀರೇಶ ಅಂಗಡಿ ಗೌಡೂರು
ನವದೆಹಲಿಯ ಸಂಸತ್ ಅಧಿವೇಶನದ ಸಮಯದಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಶ್ರೀ. ಮನ್ಸೂಕ್ ಮಾಂಡವ್ಯ ಅವರನ್ನು ಸಂಸತ್ತಿನ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿದ ರಾಜ ಅಮರೇಶ ನಾಯಕ ಸಂಸದರು ರಾಯಚೂರಿನಲ್ಲಿ ಏಮ್ಸ್ ಸ್ಥಾಪಸುವಂತೆ ಮನವಿ ಮಾಡಿದರು.
ಸುಮಾರು 260ಕ್ಕೂ ಹೆಚ್ಚು ದಿನಗಳಿಂದ ರಾಯಚೂರಿಗೆ ಏಮ್ಸ್ ಘೋಷಣೆ ಮಾಡುವ ಸಂಬಂಧ, ಧರಣಿ ನಡೆಸುತ್ತಿರುವ ಹೋರಾಟದ ವಿಷಯವನ್ನು ಪ್ರಸ್ತಾಪಿಸಿ, ಆದಷ್ಟು ಬೇಗ ಕ್ಷೇತ್ರದ ಜನರು ಮತ್ತು ಹೋರಾಟಗಾರರ ಮನವಿಗೆ ಸ್ಪಂದಿಸಲು ಮನವಿ ಮಾಡಿದರು.
ನನ್ನ ಮತ್ತು ಹೋರಾಟಗಾರರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಆರೋಗ್ಯ ಸಚಿವರು ಹೋರಾಟಗಾರರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆಂದು
ರಾಯಚೂರು ಸಂಸದರಾದ ರಾಜಾ ಅಮರೇಶ್ವರ ನಾಯಕರು ತಿಳಿಸಿದ್ದಾರೆ.