ಜಾನುವಾರುಗಳ ಚಿಕಿತ್ಸೆಗೆ ವೆಲ್ಟರ್ ನೆಟ್ ಸೌಲಭ್ಯ ಕಲ್ಪಿಸಲು ರೈತರ ಒತ್ತಾಯ
e-ಸುದ್ದಿ ವರದಿ: ವೀರೇಶ ಅಂಗಡಿ ಗೌಡೂರು
ಲಿಂಗಸಗೂರು ತಾಲೂಕಿನ ಗೌಡೂರು ಗ್ರಾಮದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ವೆಲ್ಟರ್ ನೆಟ್ ಸೌಲಭ್ಯ ಇಲ್ಲದ ಕಾರಣ ಕಳೆದ ಒಂದು ದಶಕದಿಂದ ಪಶು ವೈದ್ಯರು ಹಾಗೂ ರೈತಾಪಿ ವರ್ಗದವರು ಪರದಾಡುವಂತಾಗಿದೆ.
ಜಾನವಾರುಗಳಿಗೆ ಚಿಕಿತ್ಸೆ ನೀಡಬೇಕಾದರೆ ಮರಗಳಿಗೆ ಇಲ್ಲವೇ ವಿದ್ಯುತ್ ಕಂಬಗಳಿಗೆ ಕಟ್ಟಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಬಂದಿದ್ದು ಆದಷ್ಟು ಬೇಗ ವೆಲ್ಟರ್ ನೆಟ್ ಸೌಲಭ್ಯ ವದಗಿಸಬೇಕೆಂದು ರೈತ ಸಂಘದ ಮುಖಂಡ ಸಿದ್ದೇಶ್ ಗೌಡೂರು ಒತ್ತಾಯಿಸಿದ್ದಾರೆ.
ಸಮಸ್ಯೆಯ ಕುರಿತು ಈಗಾಗಲೇ ಸಂಬಂಧಪಟ್ಟ ಪಶು ಸಂಗೋಪನೆ ಇಲಾಖೆಯ ತಾಲೂಕು ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ
ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪ ಮಾಡಿದ್ದಾರೆ.
ಗೋ ರಕ್ಷಣೆಯ ಬಗ್ಗೆ ಶಾಸಕರು, ಸಚಿವರು ಸಂಸದರು ,ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಭಾಷಣಗಳಲ್ಲಿ, ಮಾಧ್ಯಮಗಳಲ್ಲಿ ಮಾತನಾಡುತ್ತಾರೆ. ಆದರೆ ಗ್ರಾಮೀಣ ಭಾಗದ ಪ್ರದೇಶಗಳಲ್ಲಿನ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರೆಯದಿದ್ದರು ಕೂಡ ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.
ಆದಷ್ಟು ಬೇಗನೆ ಗೌಡೂರು ಗ್ರಾಮಕ್ಕೆ ವೆಲ್ಟರ್ ನೆಟ್ ಸೌಲಭ್ಯ ಸೇರಿದಂತೆ ಅಗತ್ಯ ಔಷಧಿಗಳ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ರೈತರು ಮನವಿ ಮಾಡಿದ್ದಾರೆ.