ಶರಣರು ಐಕ್ಯವಾದ ಕೆಲ ಸ್ಥಳಗಳು ಮತ್ತು ಅವುಗಳ ಸ೦ರಕ್ಷಣೆ
ಕಲ್ಯಾಣ ಕ್ರಾಂತಿಯ ರಕ್ತಸಿಕ್ತ ಕ್ರಾಂತಿಯ ನಂತರ ಬೇರೆ ಬೇರೆ ಕಡೆಗೆ ಚದುರಿದ ಅನೇಕ ಶರಣರು ತಮ್ಮ ಜೀವ ಬಲಿದಾನ ಮಾಡಿ ವಚನ ಸಾಹಿತ್ಯವನ್ನು ಮುಂದಿನ ಮಾನವನ ಏಳ್ಗೆಗೆ ಕೊಡುಗೆಯಾಗಿ ಕೊಟ್ಟು ಹೋದರು. ಇಂದು ಅನೇಕ ಶರಣರ ಸ್ಮಾರಕಗಳು ಸಮಾಧಿಗಳು ಅತ್ಯಂತ ದುಸ್ಥಿತಿಯಲ್ಲಿವೆ .
ಬಸವಣ್ಣನವರು -ಕೂಡಲ ಸಂಗಮ
ನೀಲಾಂಬಿಕೆ -ರಕ್ಕಸ ತಂಗಡಗಿ
ಗಂಗಾಂಬಿಕೆ- ಮುಗುಟಖಾನ ಹುಬ್ಬಳ್ಳಿ (ಬೈಲ ಹೊಂಗಲ )
ಬಾಲ ಸಂಗಯ್ಯ ಬಸವಣ್ಣನವರ ಮಗ- ಮುಗುಟಖಾನ ಹುಬ್ಬಳ್ಳಿ (ಬೈಲ ಹೊಂಗಲ )
ಅಕ್ಕ ನಾಗಮ್ಮಾ -ಎಣ್ಣೆ ಹೊಳೆ (ಶಿಕಾರಿಪುರ)
ಹಡಪದ ಅಪ್ಪಣ್ಣ -ರಕ್ಕಸ ತಂಗಡಗಿ
ನುಲಿಯ ಚೆಂದಯ್ಯಾ- ನುಲಿನೂರು (ಚೆನ್ನಗಿರಿ )
ಮಡಿವಾಳ ಮಾಚಯ್ಯ-ಗೊಡಚಿ ( ರಾಮದುರ್ಗ )
ಸಿದ್ಧರಾಮ -ಸೊನ್ನಲಾಪುರ(ಸೋಲಾಪುರ )
ಅಲ್ಲಮ ಮತ್ತು ಅಕ್ಕ ಮಹಾದೇವಿ -ಶ್ರೀಶೈಲ
ಕಕ್ಕಯ್ಯ ಮತ್ತು ಬಿಷ್ಟಾ ದೇವಿ – ಕಕ್ಕೇರಿ (ಖಾನಾಪುರ )
ಕಲ್ಯಾಣಮ್ಮ- ಹರಳಯ್ಯನವರ ಪತ್ನಿ- ತಿಗಡಿ ( ಬೈಲಹೊಂಗಲ )
ಚೆನ್ನ ಬಸವಣ್ಣ -ಉಳವಿ(ಜೋಯಿಡಾ )
ಎಚ್ಚರ ಕಾಯಕದ ರಾಮಣ್ಣ ಮತ್ತು ಎತ್ತಿನ ಬಸಪ್ಪ -ಉಳವಿ
ನಗೆ ಮಾರಿ ತಂದೆ -ಮುರುಗೋಡ(ಸವದತ್ತಿ)
ರೇಚಯ್ಯಾ –ಅಂಕಲಗಿ ( ಗೋಕಾಕ )
ಬಹು ರೂಪಿ ಚೌಡಯ್ಯಾ- ಬೈರಿದೇವರ ಕೊಪ್ಪ (ಹುಬ್ಬಳ್ಳಿ )
ಉಣಕಲ್ಲ– ಇದು ಉಳಿದ ಕಲ್ಯಾಣ
ಏಕ ನಾಥ ಜೋಗ ನಾಥ – ಎಲ್ಲಮ್ಮನ ಗುಡ್ಡ (ಸವದತ್ತಿ)
ಅಂಬಿಗರ ಚೌಡಯ್ಯ -ಚೌಡಯ್ಯದಾನಪುರ(ರಾಣೆಬೆನ್ನೂರು)
ಸತ್ತ್ಯಕ್ಕ -ಶಿವಮೊಗ್ಗಾ ಹಿರೆಜಂಬುರು
ಆಯ್ದಕ್ಕಿ ಲಕ್ಕಮ್ಮ ಮಾರಯ್ಯ ಬನವಾಸಿ
ಜೇಡರ ದಾಸಿಮಯ್ಯ ದುಗ್ಗಲೇ ಮುದೇನೂರು (ಕಲ್ಬುರ್ಗಿ)
ರೇವಣ ಸಿದ್ಧರು ( ವಿಟಾ ) ಸಾಂಗ್ಲಿ
ರುದ್ರ ಮುನಿದೇವ (ಹುಣುಸೆ ಕಟ್ಟೆ -ಬೈಲ ಹೊಂಗಲ )
ಮೋಳಿಗೆ ಮಾರಿಯಾ ಮತ್ತು ಮಹಾದೇವಿ ಬೊಂತಾದೇವಿ(ಮೊಳಕೇರ- ಬಸವ ಕಲ್ಯಾಣ )
ಕೇತಯ್ಯಾ- ಬಸವ ಕಲ್ಯಾಣ .ಸಾತವ್ವ ಬೈಲೂರು (ಉಳವಿ)
ಉಳವಿಯ ಮಾರ್ಗ ಹಾಗು ಚೆನ್ನ ಬಸವಣ್ಣನವರು ತಂಗಿದ ಮುನವಳ್ಳಿ ತೊರಗಲ್ಲ ಸವದತ್ತಿ ಧಾರವಾಡ ಹುಬ್ಬಳ್ಳಿ ಉಣಕಲ್ಲ ಮುಂತಾದ ಕಡೆಗೆ ಅವರ ಹೆಸರಿನಲ್ಲಿ ಗುಡಿ ಸ್ಮಾರಕಗಳಿವೆ ಅವುಗಳ ಜೀರ್ಣೊದ್ಧಾರ ಆತ್ಯಗತ್ಯವಾಗಿದೆ.
ಇಂತಹ ಅನೇಕ ಶರಣ ಐಕ್ಯ ಸ್ಥಳಗಳನ್ನು ಗುರುತಿಸಿ ಅವುಗಳಿಗೆ ಕಾಯ ಕಲ್ಪ ಕೊಡಿಸಬೇಕು ಇದು ಬಹು ದೊಡ್ಡ ಯೋಜನೆಯಾಗಬೇಕು.
ಇದಕ್ಕೆ ರಾಷ್ಟ್ರಿಯ ಪ್ರಾಚ್ಯ ವಸ್ತು ಸಂಗ್ರಾಹಾಲಯ ಇಲಾಖೆಯ ಸವಲತ್ತುಗಳಿವೆ .ಕಾರಣ ನಮಗೆ ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಬೇಕು.
ದಯವಿಟ್ಟು ಒಮ್ಮೆ ಯೋಚಿಸಿ ಸಹ ಮತ ಮಾಡಿ ಕೈ ಜೋಡಿಸಿ .
–ಡಾ .ಶಶಿಕಾಂತ.ಪಟ್ಟಣ.ಪೂನಾ