ಮಹಿಳೆ ಸ್ವಾವಲಂಬನೆ ಸಾಧಿಸಲು ಕೌಶಲ್ಯ ಬಳಸಿ-
e-ಸುದ್ದಿ ಬೆಳಗಾವಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಅಂಗ ಘಟಕವಾದ ಕಾಯಕ ಕಟ್ಟೆ ಮಹಿಳಾ ಉದ್ದಿಮೆದಾರರ ಬಳಗದ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 12/2/2023 ರ ರವಿವಾರದಂದು ಸ್ಥಳಿಯ ಲಿಂಗಾಯತ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಯಕಕಟ್ಟೆಯ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯನಿರ್ವಾಹಕರಾದ ಶ್ರೀಮತಿ ಆಶಾ ಎಸ್ ಯಮಕನಮರಡಿ ಮಾತನಾಡಿ ನಮ್ಮ ಸಮಾಜದ ಮಹಾಳೆಯರು ಸ್ವಾವಲಂಬನೆ ಸಾಧಿಸಲು ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಪ್ರಾರಂಭಗೊಂಡ ಈ ಬಳಗ 35 ಮಹಿಳಾ ಉದ್ದಿಮೆದಾರರು ಒಂದು ವರ್ಷದಲ್ಲಿ ನಡೆಸಿದ ವ್ಯಾಪಾರ ವಹಿವಾಟು ಮೊತ್ತ 10ಲಕ್ಷಕಿಂತ ಅಧಿಕವಾಗಿದೆ ಎಂದರು.
ನಮ್ಮ ಸಂಸ್ಕೃತಿ ಹಾಗೂ ಪಾರಂಪರಿಕ ಹಸ್ತಕಲೆಗಳನ್ನು ಉಳಿಸುವಲ್ಲಿ ಈ ಮಾರುಕಟ್ಟೆ ಸಾಧನೆ ವಿಶೇಷವಾದದ್ದು ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಕೊಂಡರು.
ವೇದಿಕೆಯ ದಿವ್ಯ ಸಾನಿಧ್ಯ ವಹಿಸಿದ ಅಜಮನಗರ ರೇಣುಕಾಶ್ರಮದ ಪೂಜ್ಯಮಾತಾಜಿಯವರುಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಆಚಾರ ವಿಚಾರ ನಡೆ-ನುಡಿಗೆ ಭಗವಂತನು ಸೋತು ಆಶೀರ್ವಾದ ನೀಡುತ್ತಾನೆ ಅಂತಃಕರಣ ಸತತ ಪ್ರಯತ್ನ ಪ್ರೀತಿಗೆ ತಾಯಿ ಜಗದೀಶ್ವರಿ ಒಲಿದು ಸಫಲತೆಯನ್ನು ನೀಡುತ್ತಾಳೆ ನಿಷ್ಠೆ ಭಕ್ತಿ ಗುರುವಿನಲ್ಲಿ ನಂಬಿಕೆ ಹೊಂದಿ ಧರ್ಮ ರಕ್ಷಣೆ ಮಾಡಿ ಕಾಯಕವೇ ಕೈಲಾಸ ವೆಂದು ನಡೆದು ಸಫಲತೆಯನ್ನು ಪಡೆಯಬಹುದು ಎಂದು ಉದ್ದಿಮೆದಾರರಿಗೆ ಆಶೀರ್ವಚನ ನೀಡಿದರು.
ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವಲ್ಲಿ ಕಾಯಕ ಕಟ್ಟೆಯ ಕಾರ್ಯ ಮೆಚ್ಚುವಂತಹುದು ಇದರ ಸದುಪಯೋಗವನ್ನು ಸಮಾಜದ ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕು ಅದಕ್ಕೆ ತಮ್ಮ ಆಶೀರ್ವಾದ ಸದಾ ಇದೆ ಎಂದು ಹೇಳಿದರು.
ಆಶ್ರಮದ ಆಧ್ಯಾತ್ಮಿಕ ಚಿಂತಕಿ ದಿವ್ಯ ಅವರು ಮಾತನಾಡುತ್ತ ನಮ್ಮ ಸುತ್ತಮುತ್ತಲಿರುವ ಜನರ ಬಗ್ಗೆ ವಿಚಾರ ಮಾಡಿ ಅವರನ್ನು ಪ್ರೇರೇಪಿಸಿ ಪ್ರೋತ್ಸಾಹಿಸುತ್ತಿರುವುದು ಸಂತೋಷಕರವಾಗಿದೆ ಮುಂದಿನ ಪೀಳಿಗೆಗೆ ದಾರಿ ದೀಪವಾಗಿ ಅನುಭವ ಮಂಟವಾದ ಸಂಸ್ಕೃತಿಯನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸಿ ಕಾಯಕ ಕಟ್ಟೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಶಿಲ್ಪಾ ಚೋಗಲಿ ಅವರು ಗಂಧರ್ವ ಪ್ರಾಡಕ್ಟ್ಸ್ ಎನ್ನುವ ಹೆಸರಿನ ಗೃಹಕೈಗಾರಿಕೆ ಹೊಂದಿದ್ದು ಪರ್ಫ್ಯೂಮ್ ಸ್ಯಾನಿಟೈಸರ್ ಮಾಸ್ಕ್ ಹೇಗೆ ಇನ್ನೂ ಅನೇಕ ತರಹದ ವಸ್ತುಗಳನ್ನು ತಯಾರಿಸಿ ಯಶಸ್ವಿ ಕೈಗಾರಿಕೋದ್ಯಮಿ ಆಗಿದ್ದಾರೆ.
ತಮ್ಮ ತಾಯಿಯ ಪ್ರೇರಣೆಯಿಂದ ಉದ್ಯಮ ಸ್ಥಾಪಿಸಿ ಹೆಸರುವಾಸಿಯಾಗಿದ್ದೇನೆ ಎಂದು ಹೇಳಿದರು ಯಾವುದೇ ವರ್ಕ್ ಶಾಪ ಇದ್ದರೂ ಅದರಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆಯಬೇಕು ಇದರಿಂದ ಜ್ಞಾನ ಹೆಚ್ಚುತ್ತದೆ ಜೀವನದಲ್ಲಿ ಸೋಲು ಗೆಲುವು ಏರಿಳಿತಗಳು ಸಾಮಾನ್ಯ ಅವುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಿದ್ದಲ್ಲಿ ಯಶಸ್ವಿಯನ್ನು ಹೊಂದಬಹುದು. ಮನೆಯ ಜವಾಬ್ದಾರಿಗಳ ಜೊತೆಗೆ ಉದ್ಯಮಿಯನ್ನು ಬೆಳೆಸಬಹುದು ಯಾವುದೇ ಸಾಧನೆಗೆ ನಿರಂತರವಾದ ಪ್ರಯತ್ನ ಬೇಕು. ಒಂದು ಸಸಿಯು ಗಿಡವಾಗಿ ಫಲ ಕೊಡಬೇಕು ಎಂದರೆ ಅತ್ಯಂತ ತಾಳ್ಮೆ ನಿರಂತರ ಸೇವೆ ಪ್ರಯತ್ನ ಬೇಕೇ ಬೇಕು ಅಂದಾಗ ಗುರಿ ಮುಟ್ಟಬಹುದು ಎಂದು ಉದ್ಯಮದಾರರನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಮಹಾಸಭೆಯ ಅಧ್ಯಕ್ಷರಾದ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ತಮ್ಮ ಮಾತುಗಳಲ್ಲಿ ಮಹಾಸಭೆಯು ಯಾವತ್ತೂ ನಮ್ಮ ಸಮಾಜದ ಮಹಿಳೆಯರ ಶ್ರೇಯೋಭಿವೃದ್ಧಿಯನ್ನೆ ಬಯಸುವುದರಿಂದ ಮುಂಬರುವ ದಿನಗಳಲ್ಲಿ ತಾವು ಮಹಿಳಾ ಉದ್ದಿಮೆದಾರರಿಗೆ ಸಂಪೂರ್ಣ ಸಹಕಾರವನ್ನು ಉಚಿತವಾಗಿ ಕೊಡಲಾಗುವುದು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕಾಯಕಕಟ್ಟೆಗೆ ಪ್ರೋತ್ಸಾಹಿಸಿದಂತ ಲಿಂಗಾಯತ ಮಹಿಳಾ ಸಮಜದ ಹಿರಿಯರಾದ ಶ್ರೀಮತಿ ಶೈಲಜಾ ಭಿಂಗೆ ಹಾಗೂ ರಾಣಿ ಚೆನ್ನಮ್ಮ ಬ್ಯಾಂಕಿನ ಹಿರಿಯ ನೀರ್ದೆಶಕರಾದ ಶ್ರೀಮತಿ ರಾಜೇಶ್ವರಿ ಕವಟಗಿಮಠ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ಶ್ರೀಮತಿ ಸುಜಾತಾ ವಸ್ತ್ರದ ಪ್ರಾರ್ಥನೆ ಮಾಡಿದರು.ಶ್ರೀಮತಿ ಸೀಮಾ ಖೋತ ಸ್ವಾಗತ ನೃತ್ಯ ಮಾಡಿದರು.ಕಾಯಕ ಕಟ್ಟೆ ನಿರ್ವಾಹಕ ಮಂಡಳಿಯ ಸದಸ್ಯರಾದ ಶ್ರೀಮತಿ ಶೈಲಾ ಸಂಸುಧ್ಧಿ ವಾರ್ಷಿಕ ವರದಿ ವಾಚಿಸಿದರು. ಪೂಜ್ಯ ಮಾತಾಜೀ ಅವರ ಹಾಗೂ ಅಥಿತಿಗಳ ಪರಿಚಯವನ್ನು ಶ್ರೀಮತಿ ಸುಧಾ ಪಾಟೀಲ್ ಮಾಡಿಕೊಟ್ಟರು. ಕಾಯಕ ಕಟ್ಟೆಯ ಮಹಿಳಾ ಉದ್ದಿಮೆದಾರಾದ ಶ್ವೇತಾ,ಸೀಮಾ, ವಿಜಯಲಕ್ಷ್ಮಿ,ಮಂಜುಳಾ,ಮಹಾದೇವಿ ,ಶಕುಂತಲಾ, ಸಾರಿಕಾ.ಶ್ರೀದೇವಿ,ಪ್ರಮೀಳಾ ಬಳಗದವರೆಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸುಮನ್,ಅಲ್ಕಾ,ಮಂಜುಳಾ,ಸುಮಾ ವೇದಿಕೆ ನಿರ್ವಹಣೆ ಮಾಡಿದರು.ರೂಪಾ, ಸುವರ್ಣಾ,ಅಲ್ಪೋಪಹಾರದ ವ್ಯವಸ್ಥೆ ಮಾಡಿದರು.
ಮಮತಾ ಹಾಗೂ ಗೀತಾ ಕಾರ್ಯಕ್ರಮದ ನಿರೂಪಣೆ ಮಾಡಿದರು .ಶ್ರೀಮತಿ ವಿದ್ಯಾ ವಂದನಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ನೀಲಗಂಗಾ ಚರಂತಿಮಠ , ಶ್ರೀಮತಿ ಶೈಲಾ ಪಾಟೀಲ್, ಶ್ರೀಮತಿ ಮಾನ್ವಿ,ವೀಣಾ ಚಿನ್ನವರ,
ಶ್ರೀಮತಿ ತನುಜಾ ಹಿರೇಮಠ್ ಮೈತ್ರಿ ಕ್ಲಬ್ ಪ್ರೆಸಿಡೆಂಟ ಶ್ರೀಮತಿ ಶಾಂತಾ ಜಂಗಲ್ ಸಂಸ್ಕೃತಿ ಮಹಿಳಾ ಮಂಡಳ ಪ್ರೆಸಿಡೆಂಟ್. ಕ್ರಾಂತಿ ಮಹಿಳಾ ಮಂಡಳದಿಂದ ಶ್ರೀಮತಿ ಮಂಗಲ ಮಠದ,
ರತ್ನಶ್ರೀ, ಅನಿತಾ ಹಾಗೂ ಲಲಿತಾ ಪರ್ವತರಾವ್,ಶಾಲಿನಿ ಚಿನಿವಾರ,ರತ್ನಾ ಬೆಣಚಿನಮರಡಿ,ಸುಜಾತಾ ಮಮದಾಪುರ, ವೀಣಾ ಸಂಕ,ಗಂಗನಳ್ಳಿ, ಹುಕ್ಕೇರಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಹೇಮಲತಾ ಇಂಡಿ ಹಾಗೂ ಹಿರಿಯ ಸಾಹಿತಿಗಳಾದ ಹಮೀದಾ ಬೇಗಂ ದೇಸಾಯಿ, ಅನಸೂಯಾ ಸುಂಸುಧ್ಧಿ ನೈನಾ ಗಿರಿಗೌಡರ, ಸಂಪೂರ್ಣ ಭಾತೆ ಹಾಗೂ ಅನೇಕ ಹಿರಿಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.