e-ಸುದ್ದಿ ಕುಷ್ಟಗಿ
ತಾಲೂಕಿನ ವಿವಿಧ ಗ್ರಾಮಗಳ ವಿಕಲಚೇತನರಿಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಭಾನುವಾರ ತ್ರಿಚಕ್ರವಾಹನ ವಿತರಿಸಿದರು. ನಂತರ ಮಾತನಾಡಿ, ವಿಕಲಚೇತನರೆಂಬ ಕೀಳರಿಮೆ ಬಿಟ್ಟು ಸ್ವಾವಲಂಬಿ ಜೀವನ ನಡೆಸಬೇಕು. 2019-20 ನೇ ಸಾಲಿನ ಶೇ.5ರ ಅನುದಾನದಲ್ಲಿ ಬಿಡುಗಡೆಯಾದ 15ಲಕ್ಷ ರೂ.ಗಳ ಅನುದಾನದಲ್ಲಿ 18ವಾಹನ ಖರೀದಿಸಿ ತಾಲೂಕಿನ ವಿವಿಧ ಗ್ರಾಮಗಳ 15ಫಲಾನುಭವಿಗಳನ್ನು ಗುರುತಿಸಿ ವಿತರಿಸಲಾಗಿದೆ. ಮೂವರ ಅರ್ಜಿಗಳು ತಿರಸ್ಕೃತಗೊಂಡ ಹಿನ್ನೆಲೆ ತಡೆಹಿಡಿಯಲಾಗಿದೆ. ಪ್ರಸಕ್ತ ಸಾಲಿನ ಅನುದಾನದಲ್ಲಿ ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಯೋಜನೆ ಇದೆ ಎಂದರು. ಪ್ರಮುಖರಾದ ಹನುಮೇಶ ಶೆಟ್ಟರ್, ಇಮಾಮಸಾಬ ಗರಡಿಮನಿ, ಮಂಜುನಾಥ ಕಟ್ಟಿಮನಿ, ಚಂದ್ರಶೇಖರ ಹಿರೇಮನಿ ಇತರರು ಇದ್ದರು.
——————–
ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏