ಒಂದು ಸಂತೆ : ಸಂಸ್ಕೃತಿಗಳ ವೈಚಾರಿಕ ಚಿಂತೆ,

ನಮ್ಮ ಊರು-ನಮ್ಮ ಕಥೆ

ಒಂದು ಸಂತೆ : ಸಂಸ್ಕೃತಿಗಳ ವೈಚಾರಿಕ ಚಿಂತೆ,

ಕೊಪ್ಪಳ ಜಿಲ್ಲೆಯ ಗಿಣಿಗೇರಿ ನಗರ ,ಒಂದು ಹೋಬಳಿ‌. ಇಲ್ಲಿರುವ ಬಗನಾಳ ,ಕರ್ಕಿಹಳ್ಲಿ, ಕುಣಿಕೇರಿ, ಚಿಕ್ಕ ಬಗನಾಳ ನಾನಾ ನಮೂನೆಯ ಬೃಹತ್ ಕಾರ್ಖಾನೆಗಳು ೧೮ ಕ್ಕಿಂತಲೂ ಹೆಚ್ಚು,

ಇಟ್ಟಂಗಿ ಭಟ್ಟಿಗಳು , ಗಬ್ಬೂರು , ಹಾಲಹಳ್ಳಿ , ಭಿಮನೂರು, ಕಲ್ ತಾವರಗೇರಾ, ಕೆಂಪು ಇಟ್ಟಿಗೆಗಳ ಉದ್ಯೋಗಗಳು ಆಂಧ್ರ ಪ್ರದೇಶದ ಮಾಲೀಕರ ಒಡೆತನದ ಭಟ್ಟಿಗಳ,

ಕಾರ್ಖಾನೆಗಳ ಸಮೂಹ ಇಲ್ಲಿರುವುದರಿಂದಾಗಿ ನಾನಾ ತರಹದ ಜನರು ನಾನಾ ರಾಜ್ಯದ ಜನರ ಸಂಸ್ಕೃತಿಗಳ ಸಂಗಮ ಈ ವಾರದ ಅಂದರೆ ರವಿವಾರ ದ ಮಾರುಕಟ್ಟೆಯ ಸಂತೆ,

ಉತ್ತರಪ್ರದೇಶ, ಬಿಹಾರ, ರಾಜಸ್ಥಾನ ,ತಮಿಳುನಾಡು ಕೇರಳ ,ಆಂದ್ರ ಪ್ರದೇಶ ,ಇನ್ನೂ ಮುಂತಾದ ರಾಜ್ಯಗಳ ಕಾರ್ಮಿಕರು, ಇಲ್ಲಿಯ ಕಾರ್ಖಾನೆಯ ಉದ್ಯೋಗಕ್ಕಾಗಿ ಹಾಗೂ ಇಟ್ಟಂಗಿ ಭಟ್ಟಿಯಲ್ಲಿ ದುಡಿಯುವ ಮಹಿಳಾ ,ಕಾರ್ಮಿಕರು ತಮ್ಮ ಬದುಕು ಕಟ್ಟಿಕೊಂಡವರು ಬುಡಕಟ್ಟು ಆದಿವಾಸಿಗಳ ತರಹದವರು, ನೋಡಲು ಇಲ್ಲಿಕ ಕಾಣಸಿಗುತ್ತಾರೆ

ಎಷ್ಟೋ ದೂರದಿಂದ ಬಂದು ಇಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳುವ ಅವರ ಗಟ್ಟಿಯಾದ ಮನಸ್ಥಿತಿಅಚ್ಚರಿ ಮೂಡಿಸದೆ ಇರಲಾರದು

ಹಲವಾರು ಜನ ಕಳೆದ ಐದಹತ್ತು ವರುಷಗಳಿಂದಲೂ ಇಲ್ಲಿಯೆ ನೆಲೆಯೂರಿದವರು ಇದ್ದಾರೆ,ಇವರೆಲ್ಲರಿಗೂ ಕನ್ನಡ ಕಲಿಸಿದ ಕೀರ್ತಿ ಗಿಣಿಗೇರಿ ಸಂತೆಯದು

ಇಲ್ಲಿಯ ವ್ಯಾಪಾರ ವಹಿವಾಟು ಮಾಡುವ ಸಾಮಾನ್ಯವರ್ಗದ ಬಹುತೇಕ ಮಹಿಳೆಯರು ಹಲವಾರು ಭಾಷೆಗಳನ್ನು ಕಲಿತು ಸಂವಹನಿಸುವ ರೀತಿ ಸೋಜಿಗವೆನಿಸುವುದು .

ಸಣ್ಣ ಪ್ರಮಾಣದ ಸಂತೆ ಎನಿಸಿದರೂ ಇಲ್ಲಿರುವ ಬಹು ಬಾಷಾ ವೈವಿದ್ಯತೆ, ತಮ್ಮ ವೇಷಭೂಷಣ, ಹಾವಭಾವ
ಜೀವನಕ್ರಮ, ಜಾತ್ಯಾತೀತತೆ, ಸೌಹಾರ್ದ ,ಮತ ಸಹಬಾಳ್ವೆ, ವಿಶೇಷ ವೆನಿಸಿತು,

ಚಿತ್ರ ಬರಹ : ನಟರಾಜ್ ಸೋನಾರ್

_————————————-

ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏

Don`t copy text!