ಮಸ್ಕಿ ತಾಲೂಕ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ 2ಕೋಟಿ ಮಂಜೂರು
e- ಸುದ್ದಿ ಮಸ್ಕಿ:
ತಾಲೂಕ ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಅವರು ಭರವಸೆ ನೀಡಿದರು. ಪಟ್ಟಣದ ಭ್ರಮರಾಂಭ ದೇವಸ್ಥಾನದಲ್ಲಿ ನಡೆದ ಬಂಜಾರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ಷೇತ್ರದ ಉಪ ಚುನಾವಣೆ ಘೋಷಣೆ ಆಗುವ ಮುನ್ನ ಮಸ್ಕಿ ಪಟ್ಟಣದಲ್ಲಿ ಬಂಜಾರ ಭವನ ನಿರ್ಮಿಸಲು 2ಕೋಟಿ ಅನುದಾನ ಮಂಜೂರ ಮಾಡಲಾಗುವುದು. ಮಂಜೂರು ಮಾಡಿದ ಬಳಿಕ ಮತವನ್ನು ಹಾಕಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಕ್ಷೇತ್ರದ ವ್ಯಾಪ್ತಿಯಲ್ಲಿನ ನಿರುದ್ಯೋಗ ಯುವಕರಿಗಾಗಿ ಕೌಶಲ್ಯ ತರಬೇತಿ ಆರಂಭ ಮಾಡಲಾಗುವುದು. ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರತಾಪಗೌಡ ಪಾಟೀಲ ಅವರು ಕೈ ಜೋಡಿಸಿದ್ದಾರೆ ಉಪ ಚುನಾವಣೆಯಲ್ಲಿ ಅವರಿಗೆ ಬೆಂಬಲಿಸಬೇಕೆಂದು ಹೇಳಿದರು. ನಿಮ್ಮ ಒಂದು ಮತ ಪ್ರತಾಪಗೌಡ ಪಾಟೀಲ ಬರಿ ಶಾಸಕನಾಗಿ ಮಾಡುವುದಿಲ್ಲ ಬದಲಾಗಿ ಮಂತ್ರಿಯನ್ನಾಗಿಸುತ್ತದೆ. ಪ್ರತಿಯೊಬ್ಬರು ಬಿಜೆಪಿಗೆ ಮತ ಹಾಕಬೇಕೆಂದು ಬಂಜಾರ ಸಮಾಜದ ಜನರಿಗೆ ಮನವಿ ಮಾಡಿದರು. ಮುದಗಲ್ಲ ರಸ್ತೆಯಲ್ಲಿನ ಸಂತ ಸೇವಾಲಾಲ್ ವೃತ್ತಕ್ಕೆ ಹೂವಿನಹಾರ ಅರ್ಪಿಸಿ ಬಳಿಕ ಎತ್ತಿನಬಂಡಿ ಮೂಲಕ ಮೆರವಣಿಗೆ ನಡೆಸಿ ಭ್ರಮರಾಂಭ ದೇವಸ್ಥಾನಕ್ಕೆ ತಲುಪಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ. ಬಂಜಾರ ಸಮಾಜದ ಮುಖಂಡ ಪಾಂಡುರಂಗ ಪಮ್ಮಾರ, ಅಮರೇಶ ರೈತನಗರ. ಅಮರೇಶ ರಾಠೋಡ್,ಅಮರೇಶ ಅಂತರಗಂಗಿ, ಹರಿಶ್ಚಂದ್ರ ರಾಠೋಡ್, ಲಿಂಗಪ್ಪ ಚವ್ಹಾಣ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.