ಬಣಜಿಗ ಸಂಘದ ಸಂಸ್ಥಾಪನ ದಿನಾಚರಣೆ
ವರದಿ ವೀರೇಶ ಅಂಗಡಿ ಗೌಡೂರು
ಲಿಂಗಸುಗೂರು ತಾಲೂಕು ಬಣಜಿಗ ಸಮಾಜದ ವತಿಯಿಂದ ಬಣಜಿಗ ಸಂಘದ 20 ನೇ ವರ್ಷದ ಸಂಸ್ಥಾಪನ ದಿನಾಚರಣೆಯನ್ನು ಪಟ್ಟಣದ ಶಿವಪ್ಪ ಸಕ್ರಿಯವರ ಎ.ಪಿ.ಎಂ.ಸಿ ಯಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಮಾಜದ ಬಾಂಧವರು ಸರಳವಾಗಿ ಆಚರಿಸಿದರು.
ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸಮಾಜದ ಹಿರಿಯರಾದ ಸಿದ್ರಾಮಪ್ಪ ಕಾಡ್ಲೂರು ಅವರು ಬಣಜಿಗ ಸಂಘದ ಸಂಘಟನೆಗಾಗಿ ಸಮಾಜದ ಏಳಿಗೆಗಾಗಿ ಶ್ರಮಿಸಿದ ಹಲವು ಹಿರಿಯರನ್ನು ನೆನಪಿಸಿದರು.ಸಂಘದ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.
ಬಣಜಿಗ ಸಂಘದ ತಾಲೂಕು ಅಧ್ಯಕ್ಷರಾದ ವಿಜಯಕುಮಾರ್ ಸಾಹುಕಾರ,ಮಾಜಿ ಅಧ್ಯಕ್ಷರಾದ ದೊಡ್ಡಬಸಪ್ಪ ಅಂಗಡಿ, ಶಿವಣ್ಣ ಸಕ್ರಿ, ಬಸಣ್ಣ ಬುದ್ದಿನ್ನಿ, ಸುರೇಶ್ ಗಬ್ಬೂರು, ಮಲ್ಲಿಕಾರ್ಜುನ ಪೇರಿ, ಶರಣು ಪಟ್ಟಣ ಶೆಟ್ಟಿ, ಶಿವು ಶೆಟ್ಟಿ, ಶರಣು ಎನ್, ಅಮರೇಶ್ ಕಂದಗಲ್, ಸೇರಿದಂತೆ ಇತರರು ಭಾಗವಹಿಸಿದ್ದರು.