ಸುಶೀಲಾ ಸುಬ್ರಹ್ಮಣ್ಯ ಅವರಿಗೆ ಅಕಾಡೆಮಿ ಪ್ರಶಸ್ತಿ

ಸುಶೀಲಾ ಸುಬ್ರಹ್ಮಣ್ಯ ಅವರಿಗೆ ಅಕಾಡೆಮಿ ಪ್ರಶಸ್ತಿ’ಯೂ ಮತ್ತು ಶಿವಾನಂದ ತಗಡೂರು ಅವರ ಸಂತಸವೂ..! 

56 ವರ್ಷಗಳ ಕಾಲ ಜತನದಿಂದ ‘ಪತ್ರಿಕೆಯನ್ನು ನಡೆಸಿದ’ ಸುಶೀಲಾ ಸುಬ್ರಹ್ಮಣ್ಯ ಅವರಿಗೆ ಅಕಾಡಮಿ ಪ್ರಶಸ್ತಿ ಲಭಿಸಿದೆ. ಅವರನ್ನು  ಕಾಣಲು ಶಿವಾನಂದ ತಗಡೂರು ಅವರು ತಮ್ಮ ತಾಯಿಯಂತೆ ಅತಿಯಾಗಿ ಪ್ರೀತಿಸುತ್ತಾರೆ.

ಅಮ್ಮಾ ನಿಮಗೆ ಅಭಿನಂದನೆಗಳು..! —

ನಿಮ್ಮನ್ನು ನೋಡಲು ಬರಬಹುದೇ? ಎಂದರು ಶಿವಾನಂದ ತಗಡೂರು ಅವರು. ಕೇಳಿದರಂತೆ ಅದಕ್ಕೇನಂತೆ? ಈಗಾಗಲೇ ಬಾರೋ ಎಂದರು ಶಿವಾನಂದ ತಗಡೂರು ಅವರಿಗೆ

ಅರೆ, ಅರವತ್ತು ವರ್ಷಗಳ ಕಾಲ ‘ಸದರ್ನ್ ಎಕನಾಮಿಸ್ಟ್’ ಮ್ಯಾಗಜೀನ್ ಅನ್ನು ತನ್ನ ಸಂಪಾದಕತ್ವದಲ್ಲಿ ಹೊರ ತಂದಿರುವ, ಈ ಇಳಿ ವಯಸ್ಸಿನಲ್ಲಿ ಬತ್ತದ ಉತ್ಸಾಹದ ಬುಗ್ಗೆಯಾಗಿರುವ, ತೊಂಬತ್ತನೇ ವಸಂತಕ್ಕೆ ಕಾಲಿಡುತ್ತಿರುವ ಗಟ್ಟಿಗಿತ್ತಿ ಮಹಿಳೆ ಸುಶೀಲಾ ಸುಬ್ರಮಣ್ಯ ಅವರು.

‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿದ್ದ ಕೆ.ಎನ್.ಸುಬ್ರಹ್ಮಣ್ಯ ಅವರು ಆರಂಭಿಸಿದ ‘ಸದರ್ನ್ ಎಕನಾಮಿಸ್ಟ್’ ಮ್ಯಾಗಜೀನ್, ಅರ್ಥಿಕ ‌ವಿಷಯಗಳಿಗೆ ಸೀಮಿತವಾಗಿದೆ ಎನ್ನುವುದು ವಿಶೇಷವಾಗಿದೆ. ಪತ್ರಿಕೆ ಪ್ರಾರಂಭಿಸಿದ ನಾಲ್ಕು ವರ್ಷಗಳಲ್ಲಿ ಸುಬ್ರಹ್ಮಣ್ಯ ಕೊನೆಯುಸಿರೆಳೆದರು..!

ನಂತರ ತಮ್ಮ ಸಂಪಾದಕತ್ವದಲ್ಲಿ ಮ್ಯಾಗಜೀನ್ ತರಲು ತೀರ್ಮಾಸಿ‌ ನಾಲ್ಕಾಣೆಗೆ ಪತ್ರಿಕೆ ನೀಡಿ, ಓದುಗರ ಬಲವನ್ನು ಹೆಚ್ಚಿಸಿಕೊಂಡರು ಸುಶೀಲಾ ಸುಬ್ರಹ್ಮಣ್ಯ ಅವರು..!

ಓದುಗರನ್ನು ನಂಬಿಯೇ 56 ವರ್ಷಗಳ ಕಾಲ ಪತ್ರಿಕೆ ನಡೆಸಿದ ಹಿರಿಮೆ ಮತ್ತು ಹೆಗ್ಗಳಿಕೆ ಸುಶೀಲಾ ಸುಬ್ರಹ್ಮಣ್ಯ ಅವರದು..!

ತಮ್ಮ ಸಂಪಾದಕತ್ವದಲ್ಲಿ ‘ಸದರನ್ ಎಕನಾಮಿಸ್ಟ್’ ಆಂಗ್ಲ ನಿಯತಕಾಲಿಕೆಯನ್ನು 56 ವರ್ಷಗಳ ಕಾಲ ಮಹಿಳೆಯಾಗಿ ಮುನ್ನಡೆಸಿದರೂ ಅವರು ದಣಿದಿಲ್ಲ..!
ಕೋವಿಡ್ ಸಂದರ್ಭದಲ್ಲಿಯೂ ಪ್ರಕಟಣೆ ಹೊರತರುವ ಮೂಲಕ ಸಾಹಸವನ್ನೇ ಮಾಡಿದರು ಅವರು..!

ಭಾರತದ ಆರ್ಥಿಕ ವ್ಯವಸ್ಥೆಯ ಹಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದು, ಹಲವು ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸ ನೀಡಿರುವ ಹಿರಿಮೆ ಅವರದು..!

ಪ್ರಧಾನಿಯಾಗಿದ್ದ ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಅವರ ಜೊತೆಯಲ್ಲಿ ಸಂವಾದ ನಡೆಸಿರುವುದು ಕನ್ನಡ ನಾಡಿಗೆ ಹೆಮ್ಮೆ ತರುವಂತಹ ಸಂಗತಿಯೇ ಸರಿ.
ಅಷ್ಟೇ ಅಲ್ಲ ಮಹಿಳಾ ಪತ್ರಕರ್ತೆಯಾಗಿ ಸುದ್ದಿಮನೆಯಲ್ಲಿ ತಮ್ಮದೇ ಛಾಪು ದಾಖಲಿಸಿದ್ದಾರೆ ಸುಶೀಲಾ ಸುಬ್ರಹ್ಮಣ್ಯ ಅವರು..!

ಈ ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ನಿಯತಕಾಲಿಕೆಯನ್ನು ಹೊರತರುತ್ತಿರುವ ಸುಶೀಲಾ ಸುಬ್ರಹ್ಮಣ್ಯ ಅವರು, ಹಲವು ಸಂಘಸಂಸ್ಥೆಗಳ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ..!

ಸುದ್ದಿಮನೆಯ ಹಿರಿಯಕ್ಕೆ ಸುಶೀಲಾ ಸುಬ್ರಹ್ಮಣ್ಯ ಅವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಸುಧೀರ್ಘ ಸೇವೆಯನ್ನು ಗುರುತಿಸಿ 75 ನೇ ಅಮೃತ ಸ್ವತಂತ್ರ್ಯೋತ್ಸವ ಸಂದರ್ಭದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದಿಂದ ಶಿವಾನಂದ ತಗಡೂರು ಅವರು ಎಲ್ಲರೂ, ಗುಟ್ಟಹಳ್ಳಿಯಲ್ಲಿರುವ ಅವರ ಕಚೇರಿಗೆ ತೆರಳಿ ಸನ್ಮಾನಿಸಿದ್ದರು..!

ಸುಶೀಲಾ ಸುಬ್ರಹ್ಮಣ್ಯ  ಹಾಸನದವರು

1934ರಲ್ಲಿ ಹಾಸನದ ಕೆ.ಆರ್.ಪುರಂನಲ್ಲಿ ಜನಿಸಿದ ಸುಶೀಲಾ ಅವರು, ಗೌರಿಪುರ ಶ್ಯಾನುಬೋಗರ ಮಗಳಾದ ಕಾರಣ ಓದಿಗೆ ಕೊರತೆಯಾಗಲಿಲ್ಲ..!

ಹಾಸನದ ಸೇಂಟ್ ಫಿನೋಮಿನಾ ಮಿಡಲ್ ಸ್ಕೂಲ್‌ನಲ್ಲಿ, ಸರ್ಕಾರಿ ಬಾಲಕೀಯರ ಪ್ರೌಢಶಾಲೆ, ಸರ್ಕಾರಿ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ, ಮೈಸೂರಿನಲ್ಲಿ ಉನ್ನತ ಶಿಕ್ಷಣ ಮಾಡಿದರು. ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದಲ್ಲಿ ಕೆ.ಎನ್.ಸುಬ್ರಹ್ಮಣ್ಯ ಅವರ ಹೆಸರಿನಲ್ಲಿ ದತ್ತಿ ನಿಧಿಯನ್ನು ಇಟ್ಟಿದ್ದು, ಪ್ರತಿ ವರ್ಷ ಸಮ್ಮೇಳನದ ಸಂದರ್ಭದಲ್ಲಿ ಆಂಗ್ಲ ಪತ್ರಿಕೆಯ ಪ್ರತಿಭಾನ್ವಿತ ಪತ್ರಕರ್ತರಿಗೆ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ..! —

ವಿಜಯಪುರದಲ್ಲಿ ಪತ್ರಕರ್ತರ ಸಮ್ಮೇಳನ ಬಹಳ ಜೋರಾಗಿ ನಡೆಯಿತು ಎಂದು‌ ಕೇಳಿ ಸಂತೋಷವಾಯಿತು ಎಂದರು ಶಿವಾನಂದ ತಗಡೂರು ಅವರ ತಾಯಿ.
ಕೆಯುಡಬ್ಲ್ಯೂಜೆ ನಮ್ಮ ಪತ್ರಕರ್ತರ ಹೆಮ್ಮೆಯ ಸಂಘಟನೆ. ಅಚ್ಚುಕಟ್ಟಾಗಿ ನಡೆಸಬೇಕು ಎಂದೂ ಹಾರೈಸಿದ್ದರು ಅವರು..!

# ‘ಅಕಾಡೆಮಿ ವಿಶೇಷ ಪ್ರಶಸ್ತಿ’ಗೆ ಭಾಜನರಾಗಿರುವ ಸುಶೀಲಾ ಸುಬ್ರಹ್ಮಣ್ಯ ಅವರಿಗೆ‌ ಶಾಲು ಹೊದಿಸಿ, ಹಾರ ಹಾಕಿ, ಸಮ್ಮೇಳನದ ಬ್ಯಾಗ್ ನೀಡಿ‌ ಸತ್ಕರಿಸಿದ್ದರು ಶಿವಾನಂದ ತಗಡೂರು ಅವರು ಆಗ..!

ನಿಮ್ಮ ಕೆಲಸ‌‌ ಹೇಗೆ ‌ನಡೆದಿದೆ? ಎಂದೂ ಕೇಳಿದರು. ಈಗಷ್ಟೇ ಎಡಿಷನ್ ಮುಗಿಸಿ, ಪ್ರಿಂಟಿಂಗ್ ಗೆ ಕಳುಹಿಸಿದೆ ಎಂದಾಗ ನಿಜಕ್ಕೂ ಶಿವಾನಂದ ತಗಡೂರು ಅವರಿಗೆ ಅಚ್ಚರಿ. ತೊಂಬತ್ತರ ಹರೆಯದಲ್ಲಿ ಪತ್ರಿಕೆ ತರುವ ಅವರ ಕ್ರಿಯಾಶೀಲ ಮನಸ್ಸು ನೋಡಿ ಮನದುಂಬಿ‌ ಬಂದಿತ್ತು ಶಿವಾನಂದ ತಗಡೂರು ಅವರ ಮನಸ್ಸು..!

# ಹಾಸನದ ಕಡೆಗೆ ಹೋಗಿದ್ರಾ..! —

ಹೀಗೆಂದು ತವರನ್ನು ನೆನೆದರು ಆಗ ಸುಶೀಲಾ ಸುಬ್ರಹ್ಮಣ್ಯ ಅವರು. ಟೀ ಜೊತೆಗೆ ಬಹಳ ಹೊತ್ತು ಹರಟಿದ್ದು ಗೊತ್ತಾಗಲೇ ಇಲ್ಲ..!
ಶಿವಾನಂದ ತಗಡೂರು ಅವರಿಗೂ ಕಚೇರಿಗೆ ಹೊತ್ತಾಯಿತು ಎಂದು ಹೊರಟರು. ಆಚೆಗೆ ಬಂದು ಮಹಡಿಯಲ್ಲಿ ನಿಂತು ಶಿವಾನಂದ ತಗಡೂರು ಅವರು ದಾರಿಯಾಚೆ ಮರೆಯಾಗುವ ತನಕ ನೋಡುತ್ತಲೇ ಇದ್ದರು..!

ಯಾವುದನ್ನು ಬಯಸದ ನಿರ್ಮಲ ಹೃದಯದ ಸುಶೀಲಾ ಸುಬ್ರಹ್ಮಣ್ಯ ಅವರ ಮನೆಗೆ ‘ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ’ ಅರಸಿಬಂದಿರುವುದು, ಆ ಪ್ರಕ್ರಿಯೆಯಲ್ಲಿ ಶಿವಾನಂದ ತಗಡೂರು ಅವರೂ ಭಾಗವಾಗಿರುವುದು ಹೆಮ್ಮೆಯ ವಿಷಯ ಅನ್ನಿಸುತ್ತದೆ..!

# ಕೆ.ಶಿವು.ಲಕ್ಕಣ್ಣವರ

Don`t copy text!