ಹಳ್ಳಿಯ ಸೊಗಡಿನಲ್ಲಿ ಮಿಂಚಿದ ಸಾಕಾ ಕಾಲೇಜ್ ನ ವಿದ್ಯಾರ್ಥಿಗಳು…
e-ಸುದ್ದಿ ವರದಿ:ಇಳಕಲ್
ಇಳಕಲ್: ಎಸ್,ವ್ಹಿ ಎಸ್ ಎಜ್ಯುಕೇಶನ್ ಟ್ರಸ್ಟ್ ಶ್ರೀಮತಿ ವಿಮಲಾಬಾಯಿ ವಿಠ್ಠಲ ಸಾಕಾ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯ ಇಳಕಲ್ ನಲ್ಲಿ ಸಂಸ್ಕೃತಿಕ ಕಾರ್ಯಕ್ರಮದ ಸಂಭ್ರಮದಲ್ಲಿ ಹಳ್ಳಿ ಸೊಗಡಿನ ಉಡುಗೆ ಕೊಡುಗೆಗಳೊಂದಿಗೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಿಂಚಿದರು.
ವಿದ್ಯಾರ್ಥಿನಿಯರು ಇಳಕಲ್ ಸೀರಿಯಲ್ಲಿ ಮಿಂಚಿದರೇ. ಅದೇ ರೀತಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ದೊತ್ರ,ಪಟಗ ಪೈಜಾಮನಲ್ಲಿ ಮಿಂಚಿದರು,ಎತ್ತು ಬಂಡಿಗಳ ಮೂಲಕ ಸವಾರಿ ಮಾಡುತ್ತಾ ವಿನೂತನವಾಗಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜನ ಚೇರಮನ್ ವೆಂಕಟೇಶ ಸಾಕಾ,ಮುಖ್ಯ ಅಥಿತಿಗಳಾಗಿ ಸಂಗಣ್ಣ ಗದ್ದಿ ಹಾಗೂ ಕಾಲೇಜ್ ನ ಪ್ರಾದ್ಯಾಪಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ