ಡಾ.ಸರ್ವಮಂಗಳ ಸಕ್ರಿ ಪ್ರಥಮ ಜಿಲ್ಲಾ ಮಹಿಳಾ ಜಾನಪದ ಸಮ್ಮೇಳನದ ಅಧ್ಯೆಕ್ಷೆಯಾಗಿ ಆಯ್ಕೆ
e-ಸುದ್ದಿ ರಾಯಚೂರು
ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಫೆ.26 ರಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ನ ಮಹಿಳಾ ಘಟಕದಿಂದ ಹಮ್ಮಿಕೊಂಡಿರುವ ರಾಯಚೂರು ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಹಿಳಾ ಸಾಹಿತಿ ಡಾ.ಸರ್ವಮಂಗಳ ಸಕ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಜಾನಪದ ಪರಿಷತ್ತಿನ ಸದಸ್ಯರು ನಗರದ ಕನ್ನಡ ಭವನದಲ್ಲಿ ಸಭೆ ಸೇರಿ ಸರ್ವಾನುಮತದಿಂದ ಸಕ್ರಿ ಅವರನ್ನು ಆಯ್ಕೆ ಮಾಡಿದರು.
ಡಾ.ಸರ್ವಮಂಗಳ ಸಕ್ರಿ ಅವರು ಎಲ್.ವಿ.ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಶರಣ ಸಾಹಿತ್ಯ ಮತ್ತು ಜಾನಪದ, ತತ್ವಪದ ಸಾಹಿತ್ಯದಲ್ಲಿ ಗುರುತಿಸಿಕೊಂಡು ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.
ರಾಯಚೂರು ಜಿಲ್ಲೆಯ ತತ್ವಪದಕಾರರು ವಿಷಯದ ಮೇಲೆ ಪ್ರಬಂಧ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಹಿತ್ಯದ ಅನೇಕ ವಿಚಾರಗಳ ವಿಷಯ ಮಂಡಿಸಿದ್ದಾರೆ. ನೂರಾರು ಲೇಖನ ಬರೆದಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.
e-ಸುದ್ದಿ ಪತ್ರಿಕೆಗೆ ವಿಶೇಷ ಲೇಖನ ಬರೆಯುತ್ತಿದ್ದರು.
ಡಾ.ಸರ್ವಮಂಗಳ ಸಕ್ರಿ ಅವರನ್ನು e-ಸುದ್ದಿ ಸಂಪಾದಕ ವೀರೇಶ ಸೌದ್ರಿ, ಶಾಸಕ ಶಿವರಾಜ ಪಾಟೀಲ,ಜಾನಪದ ಪರಿಷತ್ತಿನ ವಿಭಾಗೀಯ ಸಂಚಾಲಕ ಶರಷಪ್ಪ ಗೋನಾಳ, ದಾನಮ್ಮ ಸುಭಾಸ ಚಂದ್ರ, ಲಲಿತಾ ಬಸನಗೌಡ, ಸುಮಂಗಲ ಸಕ್ರಿ, ರೇಖಾ ಪಾಟೀಲ, ನೀಲಮ್ಮ ಅರಳಿ, ಭಾರತಿ ಕುಲಕರ್ಣಿ, ತುಂಗಾ ಹಿರೇಮಠ, ರತ್ನಮ್ಮ ಪಾಟೀಲ, ಅಕ್ಕಮ್ಮ ಉಪ್ಪಿನ್, ಪ್ರತಿಭಾ ಗೋನಾಳ, ಶರಣಬಸಪ್ಪ ಅರಳಿ ಹಾಗೂ ಇತರರು ಅಭಿನಂದಿಸಿದ್ದಾರೆ.