ಶ್ರೀ ಖಿಳೆಗಾoವ ಕ್ಷೇತ್ರ ಮಹಿಮೆ.

 

ಪ್ರವಾಸ ಕಥನ ಮಾಲಿಕೆ-ಕ್ಷೇತ್ರ ದರ್ಶನ

ಶ್ರೀ ಖಿಳೆಗಾoವ ಕ್ಷೇತ್ರ ಮಹಿಮೆ.

ಖಿಳೆಗಾoವ ಬಸವಣ್ಣ ನಮ್ಮ ಮನೆ ದೇವರು. ನಮ್ಮ ಪೂರ್ವಜರಿದ್ದ ಊರು ಬಿಜಾಪುರ. ಖಿಳೆಗಾoವ… ಎಂಬ ಊರು ಇರೋದು. ಅಥಣಿ ತಾಲೂಕ. ಜಿಲ್ಲೆ ಬೆಳಗಾವಿ.
ಖಿಳೆಗಾoವ ನಲ್ಲಿರೋದು ದೊಡ್ಡ ಬಸವಣ್ಣನ ಮೂರ್ತಿ. ಪ್ರತಿನಿತ್ಯ ಪೂಜೆ.ದಾಸೋಹ ನಿರಂತರವಾಗಿ ನಡೆಯುತ್ತದೆ. ಬ್ಯಾಳಿ ಪೂಜೆ ಶ್ರೇಷ್ಠ. ಬಸವಣ್ಣನಿಗೆ ಉದ್ದು. ಚನ್ನಂಗಿಬೇಳೆ. ಅಕ್ಕಿ. ತೊಗರಿಬೇಳೆ. ಹೆಸರು ಬೇಳೆಯಿಂದ ಚಂದಾಗಿ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.
ಶ್ರಾವಣದ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ

ಕಥೆ… ಢವಳೇಶ್ವರ. ಶಾಂತಮ್ಮ ದಂಪತಿಗಳು ಶಿವಭಕ್ತರು. ದಿನಾಲೂ ಢವಳೇಶ್ವರ ತಾನು ಸಾಕಿದ ಹಸುಗಳನ್ನು ಮೇಯಿಸಲು ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದ. ಅಲ್ಲಿ ಆಕಳುಗಳನ್ನು ಮೇಯಲು ಬಿಟ್ಟು ಶಿವನಾಮಸ್ಮರಣೆಯಲ್ಲಿ ಕಾಲ ಕಳೆಯುತ್ತಿದ್ದನು. ಸಂಜೆ ಮನೆಗೆ ಬಂದು ಕೊಟ್ಟಿಗೆಯಲ್ಲಿ
ಆಕಳುಗಳನ್ನು ಕಟ್ಟುತ್ತಿದ್ದ. ಅದರಲ್ಲಿ ಒಂದು ಹಸು ಚೆನ್ನಾಗಿ ಹುಲ್ಲು ಮೆಯುತ್ತಿತ್ತು. ದಷ್ಟ ಪುಷ್ಟ ವಾಗಿದ್ದರೂ ಹಾಲು ಕೊಡುತ್ತಿರಲಿಲ್ಲ. ಯಾಕೆ ಹೀಗೆ ಎಂದು ಚಿಂತಾಕ್ರಾಂತನ್ನಾಗಿದ್ದ.
ರಾತ್ರಿ ಹಸು ಎದ್ದು ಹೋಗುವುದನ್ನು ನೋಡಿ ಹಿಂಬಾಲಿಸಿ ಹೋದ. ಹಸು ಒಂದು ಹುತ್ತಕ್ಕೆ ತನ್ನ ಹಾಲು ನೀಡುತ್ತಿತ್ತು.ಏನೂ ಗೊತ್ತಾಗದೆ ಹಾಗೇ ಬಂದು ಮಲಗಿದ.
ರಾತ್ರಿ ಕನಸಿನಲ್ಲಿ ಆದಿ ನಂದೀಶ ಬಂದು…. ನೀನು ಬೆಳಿಗ್ಗೆ ಹೋಗಿ ಹುತ್ತ ತೆಗೆದು ನನ್ನನ್ನು ಹೊರಗೆ ತೆಗೆ.ಎಂಬ ಸಂದೇಶನೀಡಿದನು.
ಅದರಂತೆ ಢವಲೇಶ ಊರಿನ ಹಿರಿಯರ ಜೊತೆ ಬಂದು ಹುತ್ತ ಸರಿಸಿದಾಗ ಬಸವಣ್ಣನ ಮೂರ್ತಿ ಸಿಕ್ಕಿತು.ಮೂರ್ತಿಯನ್ನು ಹೊತ್ತು ತಂದು ಒಂದು ಸೂರು ಮಾಡಿ ಪ್ರತಿಷ್ಠಾಪಿಸುತ್ತಾರೆ. ಊರು ಜನ ಪೂಜಿಸುತ್ತಾರೆ. ಗ್ರಾಮ ಅಭಿವೃದ್ಧಿಯಾಗಿ ಎಲ್ಲರಿಗೂ ಒಳ್ಳೆಯದಾಗುತ್ತದೆ.

ಶ್ರಾವಣದ ಕೊನೆ ಸೋಮವಾರ ಜಾತ್ರೆ ನಡೆಯುತ್ತದೆ. ನಾವೂ ಕೂಡ ಮನೆಯ ಸದಸ್ಯರ ಜನ್ಮ ದಿನದಂದು. ಮದುವೆ ವಾರ್ಷಿಕೋತ್ಸವದ ದಂದು ಬ್ಯಾಳಿ ಪೂಜೆ. ಅನ್ನ ಸಂತರ್ಪಣೆ ನಡೆಸುತ್ತೆವೆ. ನನ್ನ ಮೊಮ್ಮಗನನ್ನು ಕರೆದುಕೊಂಡು ಹೋದ ಸಂಧರ್ಭದಫೋಟೋ

ದಯಮಾಡೊ ಖಿಳೆಗಾವಿ ಬಸವಾ.
ನಿತ್ಯ ನಾಲಿಗೆ ಮೇಲಿರುವ ಉತ್ತಮ ನಾಮಾ.

ಮಲ್ಲಿಗೆ ವನಕಂಟಿ ಮಾಲಿ ನಿಮಗ
ಜೇನು ತುಪ್ಪದ ಅಭಿಷೇಕ ನಿಮಗ
ನಿತ್ಯದಲ್ಲಿ ಸತ್ಯ ಅಭಿಷೇಕ ಸ್ವಾಮಿ.
ಎಲ್ಲಾ ಊರಿಗೆ ನಿಮ್ಮ ಪೂಜೆ ಪ್ರಖ್ಯಾತ.🙏

 

ಶ್ರೀಮತಿ ವಿದ್ಯಾ ಹುಂಡೇಕಾರ

Don`t copy text!