ನಾನು ಮತ್ತು ಅವಳು

  1. ಇವತ್ತು ಪ್ರೇಮಿಗಳ ದಿನವಂತೆ

ನಾನು ಮತ್ತು ಅವಳು

ಸಂಸಾರದಲ್ಲಿ ಗಂಡ ಹೆಂಡತಿ ನೆಮ್ಮದಿಯಾಗಿ ಸುಖವಾಗಿ ಜೀವನ ನಡೆಸಬೇಕಾದರೆ, ಇವರಿಬ್ಬರ ನಡುವೆ ಒಬ್ಬರನ್ನೊಬ್ಬರು ಅರ್ಥ ಮಾಡಿ ಕೊಳ್ಳುವ ಗುಣ, ಎಷ್ಟೇ ಬ್ಯೂಸಿ ಇದ್ದರೂ ತಮ್ಮವರ ಜೊತೆಗೆ ಕೂಡ ಸಮಯ ಕಳೆಯುವುದು, ಅಹಂ ಎನ್ನುವ ಭಾವನೆ ಇಬ್ಬರ ನಡುವೆಯೂ ಕೂಡ ಇರದೇ ಇರುವುದು.. ಹೀಗಿದ್ದರೆ ಮಾತ್ರ ಸಂಸಾರದಲ್ಲಿ ನೆಮ್ಮದಿ ಕಾಣಲು ಸಾಧ್ಯ.
ಬಹುಮುಖ್ಯವಾಗಿ ಸಂಗಾತಿಯ ಜೊತೆಗೆ ನಾವು ಹೇಗೆ ನಡೆದುಕೊಳ್ಳುತ್ತೀವೆ ಎಂಬುದರ ಮೇಲೆ ನಮ್ಮಿಬ್ಬರ ಸಂಬಂಧ ನಿಂತಿರುತ್ತದೆ. ಎಷ್ಟು ಖುಷಿಯಾಗಿ ಜೀವನ ನಡೆಸುತ್ತೀವೆ, ನಮ್ಮಿಬ್ಬರ ನಡುವೆ ಬಾಂಧವ್ಯ ಹೇಗಿದೆ ಎಲ್ಲವೂ ಸಹ ನಮ್ಮ ಸಾಂಸಾರಿಕ ಜೀವನವನ್ನು ತೋರಿಸುತ್ತದೆ.

ನನ್ನ ಸಂಗಾತಿಗಾಗಿ ಮತ್ತು ಆಕೆಯ ಮನಸ್ಸಿನ ಸಂತೋಷಕ್ಕಾಗಿ ನಾನು ಏನೆಲ್ಲ ಮಾಡಬಹುದು ಅದನ್ನು ನಾನು ಮಾಡಲೇಬೇಕು. ಆಗಷ್ಟೇ ನಮ್ಮ ಜೀವನ ಈಸಿ ಗೋಯಿಂಗ್ ಆಗಿರುತ್ತದೆ. ನಮ್ಮ ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳಲು ನಾವು ನಮ್ಮವರಿಗೆ ಏನೆಲ್ಲ ಹೇಳುತ್ತೇವೆಯೋ ಅದರಂತೆ ನಡೆದುಕೊಳ್ಳಬೇಕು.

ನನ್ನ ಸಂಗಾತಿ ನನಗಾಗಿ ಮಾಡಿದ್ದನ್ನೆಲ್ಲಾ ಪ್ರಶಂಶಿಸುತ್ತೇನೆ!
ಕೆಲವೊಂದು ಸಂದರ್ಭದಲ್ಲಿ ಹೀಗೂ ಕೂಡ ಆಗುತ್ತದೆ. ಅದೇನೆಂದರೆ ನನ್ನ ಸಂಗಾತಿ ನಮಗಾಗಿ ಸದುದ್ದೇಶ ದಿಂದ ಏನನ್ನಾದರೂ ಮಾಡುತ್ತಾರೆ.
ಅದನ್ನು ನಾವು ನಮ್ಮ ಬ್ಯುಸಿ ಸಮಯದಲ್ಲಿ ಗಮನಿಸದೇ ಹೋಗಬಹುದು ಅಥವಾ ಅವರು ಎಕ್ಸ್ಪೆಕ್ಟ್ ಮಾಡಿದ ರೀತಿಯಲ್ಲಿ ಅವಳಿಗೆ ಮೆಚ್ಚುಗೆ ಹೇಳಲು ಮರೆತಿರಬಹುದು.
ಇದರಿಂದ ಅವಳ ಮನಸ್ಸಿಗೆ ಬೇಸರವಾಗುತ್ತದೆ. ನಾವು ಅವಳನ್ನು ಗಮನಿಸುತ್ತಿಲ್ಲ ಎನಿಸುತ್ತದೆ. ಹಾಗಾಗಿ ಸಾಧ್ಯ ವಾದಷ್ಟು ಈ ಬಗ್ಗೆ ಎಚ್ಚರವಹಿಸಿ. ನನ್ನ ಸಂಗಾತಿಗೆ ಪ್ರಶಂಸೆ ಬಹಳ ಮುಖ್ಯವಾಗಿದೆ ಎಂಬುದನ್ನು ಮರೆಯುವುದಿಲ್ಲ.
ನನ್ನ ಸಂಗಾತಿ ಹೇಳಿದ್ದನ್ನು ನಾನು ಕಿವಿಗೊಟ್ಟು ಆಲಿಸುತ್ತೇನೆ
ನಾನು ಒಬ್ಬ ಒಳ್ಳೆಯ ಕೇಳುಗ ಎಂದು ಹೇಳಬಲ್ಲೆ. ಹಾಗಾಗಿ ನನ್ನ ಸಂಗಾತಿಗೆ ಸಂಪೂರ್ಣವಾಗಿ ಮಾತನಾಡಲು ಬಿಡುತ್ತೇನೆ. ಮತ್ತು ಅವಳು ಹೇಳಿದ್ದನ್ನು ನಾನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತೇನೆ.

ನನ್ನ ಜೀವನದಲ್ಲಿ ಸಾಕಷ್ಟು ಕಷ್ಟದ ಸಮಯ ಕಳೆದಿದ್ದೇನೆ.ಅವಳು ಆಗೆಲ್ಲ ಬಹಳಷ್ಟು ನೊಂದುಕೊಳ್ಳುತ್ತಾಳೆ. ನಾನು ಕಷ್ಟ ಪಡುತ್ತಿರುವದಕ್ಕೆ ಕಳವಳಗೊಳ್ಳುತ್ತಾಳೆ. ಆಗ ಅವಳ ಮುಖದಲ್ಲಿ ನಗು ಮೂಡಿಸುವ ಪ್ರಯತ್ನ ಮಾಡುತ್ತೇನೆ.
ಪ್ರತಿಯೊಬ್ಬರಿಗೂ ಕಷ್ಟ ಬರುತ್ತದೆ. ಅದು ಸ್ವಲ್ಪ ಸಮಯ ಆಗಿರಬಹುದು, ಇಡೀ ದಿನ ಆಗಿರ ಬಹುದು ಅಥವಾ ಕೆಲವು ವಾರಗಳ ತನಕ ಇರಬಹುದು.
ಅದೇನೇ ಆಗಿದ್ದರೂ, ನಾನು ನಿನ್ನ ಜೊತೆ ಇರುತ್ತೇನೆ ಎಂಬ ಭರವಸೆ ನೀಡುತ್ತೇನೆ. ಜೊತೆಗೆ ನಿನ್ನ ಮನಸ್ಸಿಗೆ ನೆಮ್ಮದಿ ಮತ್ತು ಮುಖದ ಮೇಲೆ ನಗು ತರಿಸುವ ಪ್ರಯತ್ನ ನನ್ನದು ಎನ್ನುವ ಮಾತು ಕೊಡುತ್ತೇನೆ.
ಸಂಸಾರದಲ್ಲಿ ಖುಷಿಯಾಗಿರಬೇಕು ಅಂದರೆ, ನಾವಿಬ್ಬರು ಚನ್ನಾಗಿರಬೇಕು.
ನನ್ನ ಸಂಗಾತಿಯನ್ನು ಆಗಾಗ ಸಿನಿಮಾಗೆ ಕರೆದುಕೊಂಡು ಹೋಗುತ್ತೇನೆ
ಯುವ ಪ್ರೇಮಿಗಳಲ್ಲಿ ಇದು ಆಗಿನಿಂದ ಬೆಳೆದು ಬಂದ ಸಂಪ್ರದಾಯ. ಇಷ್ಟಪಟ್ಟ ಸಿನಿಮಾ ವಾರದಲ್ಲಿ ಒಂದನ್ನಾದರೂ ನೋಡುವುದು ಒಂದು ರೀತಿಯ ರೋಮ್ಯಾಂಟಿಕ್ ಕ್ಷಣವನ್ನು ಉಂಟುಮಾಡುತ್ತದೆ.
ಈಗ ಡಿಜಿಟಲ್ ಕಾಲ ಆಗಿರುವುದರಿಂದ ಮನೆಯಲ್ಲಿ ಕುಳಿತು ಕೂಡ ಮೂವಿ ನೋಡತ್ತೇವೆ.

ಆಗಾಗ ನನ್ನ ಸಂಗಾತಿಗೆ ಸರ್ಪ್ರೈಸ್ ಕೊಡುತ್ತೇನೆ. ಅವಳಿಗೆ ಐಸ್ ಕ್ರೀಂ ಅಂದರೆ ಬಲು ಇಷ್ಟ. ಐಸ್ ಕ್ರೀಂ ಮತ್ತು ಚಾಕಲೇಟ್ ಕೊಡಿಸುತ್ತೇನೆ. ಇಬ್ಬರು ಬೈಟು ತಿನ್ನುತ್ತೇವೆ. ಬೈಟು ತಿನ್ನುವುದೆಂದರೆ ಅವಳಿಗೆ ಬಲು ಖುಷಿ. ವರ್ಷಕ್ಕೆ ಒಮ್ಮೆಯಾದರೂ ಹೊರಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇನೆ.

ನನಗೆ ಫೆ.-14 ಪ್ರೇಮಿಗಳ ದಿನವಲ್ಲ. ನಿತ್ಯವೂ ಪ್ರೇಮಿಗಳಂತೆ ಕಳೆಯಲು ಪ್ರಯತ್ನಿಸಿತ್ತೇನೆ.
ನಾನು ಮತ್ತು ಅವಳು ಈ ಭೂಮಿ ಮೇಲೆ ಶಾಶ್ವತವಾಗಿ ಏನಾದರೂ ಬಿಟ್ಟು ಹೋಗಬೇಕು ಎಂದು ನಿರ್ಧರಿಸಿದ್ದೇವೆ. ಅದು ನಗು ಮಾತ್ರ ಎಂತಹ ಕಷ್ಟ ಕಾಲದಲ್ಲೂ‌ ನಗುತ್ತಿರಬೇಕು. ಮತ್ತು ಎಲ್ಲರೊಂದಿಗೆ ಪ್ರೀತಿಯನ್ನು ಹಂಚುತ್ತಿರಬೇಕು ಎಂದು ಕೊಂಡಿದ್ದೇವೆ. ಇದಕ್ಕಿಂತ ಇನ್ನೇನು ಕೊಡಲು ಸಾಧ್ಯ. ಪ್ರಕೃತಿ ಎಲ್ಲವನ್ನು ಕೊಟ್ಟಿದೆ. ನಾವು ಕೊಡುವುದು ಬಾಕಿ ಇದೆ.

ಸೌವೀ ಮಸ್ಕಿ

Don`t copy text!