‘ಕವನಗಳಿಗೆ ಆಹ್ವಾನ ‘
e-ಸುದ್ದಿ ವಿಜಯಪುರ
ಇತ್ತೀಚೆಗೆ ನಮ್ಮನ್ನು ಅಗಲಿದ ವಿಶ್ವದ ಮಹಾನ್ ಚೇತನ, ಶತಮಾನದ ನಿಜ ಸಂತ ಸಿದ್ದೇಶ್ವರಶ್ರೀಗಳ ಬಗ್ಗೆ ಒಂದು ಶ್ರೇಷ್ಠ ಕಾವ್ಯ ಗುಚ್ಛವನ್ನು ಪ್ರಕಟಿಸಬೇಕೆಂದು ಶ್ರೀ ಸಿದ್ಧೇಶ್ವರ ಚಿಂತನ ಅಕೆಡೆಮಿ ವಿಜಯಪುರ ಅವರು ನಿರ್ಧರಿಸಿದ್ದಾರೆ.
ಈ ಸಂಕಲನವು 82 ಕವನಗಳನ್ನೊಳಗೊಂಡಿರುತ್ತದೆ. ನಾಡಿನ ಹಿರಿಯ ಶಿಕ್ಷಣ ತಜ್ಞರಾದ ಪ್ರೊ.ಎನ್.ಜಿ.ಕರೂರ ಅವರು ಶ್ರೀಗಳಿಗೆ ಅವರು ಇದ್ದಾಗಲೇ ಬರೆದು ಓದಿದ ಅಧ್ಯಾತ್ಮದ ಔನ್ನತ್ಯದ ಲೇಖನವನ್ನು ಇದು ಹೊಂದಿರುತ್ತದೆ.
ಅದಕ್ಕಾಗಿ ನಾಡಿನ ಕವಿಗಳು/ ಕವಯಿತ್ರಿಯರು ಶ್ರೀಗಳನ್ನು ಕುರಿತು ಬರೆದ ಉತ್ತಮ ಕವನವನ್ನು ನುಡಿ ತಂತ್ರಾಂಶದಲ್ಲಿ ಟೈಪಿಸಿ ಈ ಕೆಳಗಿನ ಮೇಲ್ ಗೆ ದಿನಾಂಕ 1.3.2023ರೊಳಗಾಗಿ ಕಳಿಸಬೇಕೆಂದು ಅಕಾಡೆಮಿಯ ಸಂಚಾಲಕರಾದ ಶ್ರೀನಿವಾಸ ಜಾಲವಾದಿ, ರಮೇಶ ಕೋಟ್ಯಾಳ, ವಿಸಂಪಾ ಖೇಡಗಿ ಅವರು ತಿಳಿಸಿದ್ದಾರೆ.
ಇಮೇಲ್ rameshkotyal2023@gmail.com
ವ್ಯಾಟ್ಸಾಪ್ 9886563179,9113662758,9449122892
ಇವುಗಳಿಗೂ ಕಳಿಸಬಹುದು.
ಕವನ ಕಳಿಸುವವರು ತಮ್ಮ ಹೆಸರು, ವಿಳಾಸ, ಮೊಬೈಲ್ ನಂಬರನ್ನು ಹಾಕಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
–ರಮೇಶ ಕೋಟ್ಯಾಳ
ಸಾಹಿತಿಗಳು, ವಿಜಯಪುರ
mob.9113662758