ಇಳಕಲ್ ನಗರಸಭೆಗೆ ನೂತನ ಪೌರಾಯುಕ್ತರಾಗಿ ಎಸ್ ನಂಜುಂಡಸ್ವಾಮಿ…
e-ಸುದ್ದಿ ಇಳಕಲ್
ಕರ್ನಾಟಕ ರಾಜ್ಯ ವಿಧಾನಸಭೆ 2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ನೀಡಿರುವ ನಿರ್ದೇಶನದ ಮೇರೆಗೆ ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೋರಾಯುಕ್ತರಗಳನ್ನು ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳು ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಸ್ಥಳ ನಿಯತ್ತಿ ಗೊಳಿಸಿ ಆದೇಶಿಸಿದೆ
ಇಳಕಲ್ ನಗರಸಭೆಗೆ ನೂತನ ಪೌರಾಯುಕ್ತರಾಗಿ ಎಸ್ ನಂಜುಂಡಸ್ವಾಮಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಈ ಹಿಂದೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಗರಸಭೆಗೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್ ನಂಜುಂಡಸ್ವಾಮಿ ಅವರು ದಕ್ಷ ಅಧಿಕಾರಿಯಂದೆ ಖ್ಯಾತಿ ಪಡೆದ ಇವರು ಬಾಗಲಕೋಟ್ ಜಿಲ್ಲೆ ಇಲಕಲ್ ನಗರಸಭೆಗೆ ಪೌರಾಯುಕ್ತರಾಗಿ ಆಗಮಿಸಿ ಜಿಡ್ಡು ಕಟ್ಟಿದ ನಗರಸಭೆಗೆ ಹೊಸ ಕಳೆ ನೀಡಲಿ ಎಂಬುದು ಇಳಕಲ್ ಜನತೆಯ ಆಶಯ.
ವರದಿಗಾರರು: ಶರಣಗೌಡ ಕಂದಕೂರ