ಗಜಲ್

ಗಜಲ್

ನೋವುಗಳ ನಡುವೆ ನೆಮ್ಮದಿ ಹುಡುಕುವುದೇ ಪಯಣ
ಸಂಬಂಧಗಳ ನಡುವೆ ಪ್ರೀತಿ ಹುಡುಕುವುದೇ ಪಯಣ

ಬಾಳಲಿ ಜೊತೆಗೂಡಿ ಪ್ರೀತಿಸಿದ್ದೆ ನಮ್ಮ ಭಾಗ್ಯ
ನಿನ್ನ ನೆರಳ ದಾರಿ
ಹುಡುಕುವುದೇ ಪಯಣ

ನೆನೆದಾಗ ಜೊತೆಯಾದ ಸಾಮಿಪ್ಯವೇ ಮಧುರ
ಮುನಿಸಿ ಹೋದಾಗ
ಹುಡುಕುವುದೇ ಪಯಣ

ಬೆಂದ ವಿರಹದಲಿ ನೋವು ನುಂಗುವುದೆ ಜೀವನ
ನೊಂದ ನೋವಲಿ ನಲಿವು ಹುಡುಕುವುದೇ ಪಯಣ

ಸಮರಸದ ಪಯಣವೇ ಮಧುರಾತಿ ಮಧುರ
ರೋಹಿಗೆ ಆಶಯ ದಾರಿ
ಹುಡುಕುವುದೇ ಪಯಣ.

ರೋಹಿಣಿ ಯಾದವಾಡ

Don`t copy text!