ಪೂಜ್ಯರುಗಳ ಆಶೀರ್ವಚನದೊಂದಿಗೆ ಸಂಭ್ರಮದಿಂದ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ….
e-ಸುದ್ದಿ ಇಳಕಲ್
ಎಸ್ ಆರ್ ಏನ್ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ನವಲಿ ಹಿರೇಮಠ್ ರ ತಮ್ಮ ಮಗಳ ಆರತಕ್ಷತೆ ಸಮಾರಂಭ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಕಾರ್ಯಕ್ರಮ ನಾಡಿನ ವಿವಿಧ ಮಠಾಧೀಶರುಗಳ ದಿವ್ಯ ಸಾನಿದ್ಯದಲ್ಲಿ ಸಂಭ್ರಮದಿಂದ ನಡೆಯಿತು.
ಇಳಕಲ್ ನಗರದ ಆರ್ ವೀರಮಣಿ ಕ್ರೀಡಾಂಗಣದಲ್ಲಿ ಡಾಕ್ಟರ್ ಗಂಗಾಂಬಿಕಾ ಜೊತೆ ಡಾಕ್ಟರ್ ಮಹೇಶ್ ಎನ್ ಆರತಕ್ಷತೆಯ ಸಮಾರಂಭ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಜರಗಿತು.
ಈ ಸಮಾರಂಭದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಶ್ರೀ ಗಳ ದಿವ್ಯ ಆಶೀರ್ವಚನದೊಂದಿಗೆ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಕಾರ್ಯಕ್ರಮ ಜರುಗಿತು.
ಸುಮಾರು 100 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ದಾಂಪತ್ಯ ಜಿವನಕ್ಕೆ ಕಾಲಿಟ್ಟರು.
ಈ ಸಮಾರಂಭಕ್ಕೆ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಹಾಗೂ ವಿವಿಧ ರಾಜಕೀಯ ನಾಯಕರು ಆಗಮಿಸಿ ನೂತನ ವಧುವರರಿಗೆ ಶುಭ ಆರೈಸಿದರು.
ವರದಿಗಾರರು: ಶರಣಗೌಡ ಕಂದಕೂರ