e-ಸುದ್ದಿ ಮಸ್ಕಿ
ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಸ್ವಾರ್ಥಕ್ಕಾಗಿ ಕಾಂಗ್ರೇಸ್ ಬಿಟ್ಟಿದ್ದಾರೆ.ಈ ಬಾರಿ ಬೈ ಎಲೆಕ್ಷನಲ್ಲಿ ಜನ ಪ್ರತಾಪಗೌಡ ಪಾಟೀಲಗೆ ತಕ್ಕ ಪಾಠ ಕಲಿಸಲಿದ್ದಾರೆಂಬ ವಿಶ್ವಾವಿದೆ ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಹತ್ತಿರದ ಬಯಲು ಜಾಗದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಸನಗೌಡ ತುರ್ವಿಹಾಳ ಪಕ್ಷ ಸೇರ್ಪಡೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಮಸ್ಕಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದೇನೆ.ಅನುದಾನ ನೀಡಿಲ್ಲವೆಂಬ ಪ್ರತಾಪಗೌಡರ ಮಾತು ಬರಿ ಸುಳ್ಳು ಎಂದ ಸಿದ್ದರಾಮಯ್ಯ ಕಿಡಿ ಕಾರಿದರು.
ಮಸ್ಕಿ ಬೈ ಎಲೆಕ್ಷನಲ್ಲಿ ಕಾಂಗ್ರೇಸ್ ಪಕ್ಷ ಗೆಲುವು ನಿಶ್ಚಿತ.ಬಿಜೆಪಿಯಲ್ಲಿದ್ದ ಬಸನಗೌಡ ಇಂದು ಕಾಂಗ್ರೇಸ್ ಸೇರಿದ್ದಾರೆ.
ಚುನಾವಣೆ ಘೋಷಣೆಯಾದ ನಂತರ ಅಭ್ಯರ್ಥಿ ಘೋಷಣೆ ಮಾಡ್ತೆವೆ ಎಂದ ಸಿದ್ದರಾಮಯ್ಯ ಹೇಳಿದರು.
ರೋಶನಬೇಗ ನಮ್ಮ ಪಾರ್ಟಿಯಲ್ಲಿಲ್ಲ. ಅವರಿಗೂ ನಮಗೂ ಸಂಬಂಧವಿಲ್ಲ ಎಂದ ಸಿದ್ದರಾಮಯ್ಯ, ಐಎಂಎ ಹಗರಣದಲ್ಲಿ ಜಮೀರ್ ಅಹ್ಮದ ಭಾಗಿ ಆರೋಪ ವಿಚಾರದಲ್ಲಿಈಗಾಗಲೇ ಅವರನ್ನ ಕರೆಸಿ ಸಿಸಿಬಿ ವಿಚಾರಣೆ ಮಾಡಿದೆ.
ಈಗಾಗಲೇ ಎರಡ ಮೂರು ಬಾರಿ ಜಮೀರ ವಿಚಾರಣೆ ವೇಳೆಯಲ್ಲಿ ಅವರದೆನು ಪಾತ್ರವಿಲ್ಲವೆಂದು ಹೇಳಿದ್ದಾರೆ ಎಂದರು.
ಕಾಂಗ್ರೇಸನಲ್ಲಿ ನಾಯಕತ್ವದ ಗೊಂದಲವಿದೆ ಎಂಬ ಕಟೀಲು ಹೇಳಿಕೆ ಬರಿ ಸುಳ್ಳು ಎಂದ ಸಿದ್ದರಾಮಯ್ಯ ಕಾಂಗ್ರೇಸ್ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ.ಕಟೀಲು ಹೇಳ್ತಿರೊದೆಲ್ಲ ಬರಿ ಸುಳ್ಳು ಎಂದರು
————————————————-
ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏