ಮುದೇನೂರಿನಲ್ಲಿ ಪುರಾಣ ಮಹಾಮಂಗಳೋತ್ಸವ

 


ಮುದೇನೂರಿನಲ್ಲಿ ನಡೆದ ಪುರಾಣ ಮಹಾಮಂಗಳೋತ್ಸವದಲ್ಲಿ ಭಾಗಿಯಾದ ಪೂಜ್ಯ ಶ್ರೀ ಡಾ.ಚನ್ನಬಸವ ದೇಶಿಕೇಂದ್ರ ಶಿವಾಚಾರ್ಯರು.‌..

e-ಸುದ್ದಿ ವರದಿ:ಮುದೇನೂರ

ಶ್ರೀ ವರದ ಉಮಾ ಚಂದ್ರ ಮೌಳೇಶ್ವರ ಮಾಂಗಲ್ಯ ಮಂದಿರ ಮುದೇನೂರು ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಶ್ರೀ ಘತ್ತರಗಿ ಭಾಗ್ಯವಂತಿ ದೇವಿಯ ಪುರಾಣ ಮಹಾಮಂಗಳೋತ್ಸವ ಕಾರ್ಯಕ್ರಮದಲ್ಲಿ ನಂದವಾಡಗಿಯ ಪೂಜ್ಯಶ್ರೀಗಳು ಭಾಗವಹಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮುದೇನೂರಿನ ಹಿರಿಯರು ಹಾಗೂ ನಾಗರಿಕರು ಸ್ವಾಗತ ಮಾಡಿಕೊಂಡರು.

5 ದಿವಸಗಳ ಕಾಲ ನಡೆಯುವ ಮುದೇನೂರಿನ ಆರಾಧ್ಯದೈವ ಚಂದ್ರಶೇಖರ ಮಹಾಸ್ವಾಮಿಗಳ
ಅವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿದ ಧಾರ್ಮಿಕ ಕಾರ್ಯಕ್ರಮಗಳು ,ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಮುದೇನೂರ ಗ್ರಾಮದ ಸಕಲ ಸದ್ಭಕ್ತರು ,ಗ್ರಾಮದ ಗುರುಹಿರಿಯರು, ಯುವಕರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!