ಮರಟಗೇರಿ ಗ್ರಾಮದಲ್ಲಿ ಧನದ ಶೆಡ್ಡಿಗೆ ಬೆಂಕಿ, ಅಪಾರ ಹಾನಿ
e-ಸುದ್ದಿ ವರದಿ:ಇಳಕಲ್
ಇಳಕಲ್ – ತಾಲೂಕಿನ ಮರಟಗೆರಿ ಗ್ರಾಮದಲ್ಲಿ ಅಡೆಪ್ಪಗೌಡ ಇಟ್ಲಾಪುರ್. ಎಂಬುವರಿಗೆ ಸೇರಿದ ದನದ ಶೆಡ್ ಬೆಂಕಿ ಆವುತಿಯಾಗಿ ಅಪಾರ ಹಾನಿಯಾಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಶಡ್ಡಿನಲ್ಲಿರುವ ಎರಡು ಎಮ್ಮೆಗಳಿಗೆ ಸುಟ್ಟು ಗಾಯಗಳಾಗಿದ್ದು ಶೆಡ್ ನಲ್ಲಿರುವ ಎಲ್ಲಾ ವಸ್ತುಗಳಿಗೆ ಬೆಂಕಿ ಆವೃತ್ತಿಯಾಗಿದ್ದವು
ಬೆಂಕಿ ಊರ ಹತ್ತಿರ ಇರುವದರಿಂದ ಊರಿನಲ್ಲಿರುವ ಮನೆಗಳಿಗೆ ಹರಡುವ ಬೆಂಕಿಯನ್ನು ತಡೆಗಟ್ಟಿ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ಅಗ್ನಿಶಾಮಕದಳದ ಸಿಬ್ಬಂದಿ ತಡೆಗಟ್ಟಿದ್ದು ಗ್ರಾಮದ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಜಗದೀಶ ಗಿರಡ್ಡಿ, ಭೀಮಪ್ಪ ವಾಣಿಕ್ಯಾಳ, ರಫೀಕ್ ವಾಲಿಕಾರ್,ಬಸವರಾಜ್ ಕಟ್ಟಿಮನಿ,ರವಿ ಲಮಾಣಿ, ಬಸವರಾಜ ಶೀಲವಂತರ್ , ಎಲ್ಲ ಸಿಬ್ಬಂದಿಗಳು ಬೆಂಕಿ ಅನಾಹುತ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಮೂಲಕ ಮುಂದೆ ಆಗಬಹುದಾದ ದೊಡ್ಡ ಅನಾಹುತ ಒಂದನ್ನು ತಪ್ಪಿಸಿದರು.
ವರದಿಗಾರರು: ಶರಣಗೌಡ ಕಂದಕೂರ