ಇಳಕಲ್ ನಗರದಲ್ಲಿ ಶಿವಾಜಿ ಜಯಂತಿ ನಿಮಿತ್ಯ ಬೃಹತ್ ಬೈಕ್ ರ್ಯಾಲಿ…
e-ಸುದ್ದಿ ವರದಿ:ಇಳಕಲ್
ಇಳಕಲ್ ನಗರದ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ನಗರಸಭೆ ಅದ್ಯಕ್ಷ ಲಕ್ಷ್ಮಣ ಗುರುಂ, ರಾಜುಗೌಡ ದೊಡ್ಡನಗೌಡ ಪಾಟೀಲ್ ಅವರು ಅಜಾದ್ ಸರ್ಕಲ್ ನಲ್ಲಿ ಚಾಲನೆಯನ್ನು ನೀಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬೈಕ್ ರ‍್ಯಾಲಿಯಲ್ಲಿ ಸುಮಾರು 5೦೦ ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿದ್ದವು.
ರ‍್ಯಾಲಿ ಅಜಾದ್ ಚಂದ್ರಶೇಖರ ಸರ್ಕಲ್‌ದಿಂದ ಆರಂಭವಾಗಿ ಸುಭಾಷ ರಸ್ತೆ, ನಗರಸಭೆ ಕಾರ್ಯಾಲಯ, ಕಂಠಿ ಸರ್ಕಲ್, ಬಸ್ ನಿಲ್ದಾಣ, ಮಹಾಂತ ಗಂಗೋತ್ರಿ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಹೊರಟು ಅಲ್ಲಿಂದ ಮರಳಿ ಕಂಠಿ ಸರ್ಕಲ್‌ಗೆ ಆಗಮಿಸಿ ಅಲ್ಲಿಂದ ಗೊರಬಾಳ ನಾಕಾ ಮಾರ್ಗವಾಗಿ ಗಾಂಧಿ ಚೌಕ, ವೆಂಕಟೇಶ ದೇವಸ್ಥಾನ ಬಜಾರ ಬಸವನಗುಡಿ, ಶ್ರೀರಾಮ ಮಂದಿರ, ಕೊಪ್ಪರದ ಪೇಟೆ ಬನಶಂಕರಿ ದೇವಸ್ಥಾನ, ಪಶುಚಿಕಿತ್ಸಾಲಯ, ಅಂಬಾಭವಾನಿ ದೇವಸ್ಥಾನ ಮಾರ್ಗವಾಗಿ ಮರಳಿ ಅಜಾದ್ ಸರ್ಕಲ್‌ಗೆ ತಲುಪಿತು.
ಮೆರವಣಿಗೆಯ ನೇತೃತ್ವವನ್ನು ಹಿಂದೂ ಸೇವಾ ಟ್ರಸ್ಟ್ ಸಮಿತಿಯ ಸದಸ್ಯರಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ, ಎಂ,ಆರ್, ಪಾಟೀಲ್, ಶಿವು ಮಾದಗುಂಡಿ,ಆನಂದ ಹಾಗೂ ಮತ್ತಿತರರು ವಹಿಸಿದ್ದರು.
ವರದಿಗಾರರು: ಶರಣಗೌಡ ಕಂದಕೂರ