ನಗೆಯು ನಂದಾ ದೀಪ
ನಗುವೇ ನೀನೆಷ್ಟು ಸುಂದರ
ಮುಗ್ದ ಮನದ ಮಂದಿರ
ಮುಖದಿ ಬಾನ ಚಂದಿರ
ಸಾವಿರ ಸಂಭಂದದ ಹಂದರ
ಬಾಳ ಕತ್ತಲೆಯ ಸರಿಸಿ
ಬದುಕ ನೋವ ಮರೆಸಿ
ಜಗವ ಗೆಲ್ಲುವ ರೂಪ
ನಗೆಯು ನಂದಾ ದೀಪ
ನಿನ್ನ ಬೆಳಕಿನ ದಿವ್ಯತೇಜದಲಿ
ಸವೆದ ದಾರಿ ತಿಳಿಯಲಿಲ್ಲ
ನಗೆಯು ಭಾವಗೀತೆ
ಒಲವ ಪಯಣಕೆ ಹಣತೆ
ಹೊಗೆ ಧಗೆ ಯಿಲ್ಲದ ನಗೆ
ವ್ಯಂಗ್ಯ ಕುಹಕವಿಲ್ಲದ ನಗೆ
ಕೋಪ ಸುಡುವ ನಗೆ
ಬೇಕು ಭರವಷೆಯ ನಗೆ
ನಗುವು ಸ್ವರ್ಗ ವೆಂದರು
ನಕ್ಕುಬಿಡು ನೀನೊಮ್ಮೆ
ನಾನೂನೂ ನಕ್ಕೇನ
ದುಃಖ ಪಕ್ಕಕ್ಕಿರಿಸಿ
ನಗುನಗುತ ಬಾಳೋಣ
–ಡಾ. ಶರಣಮ್ಮ ಗೊರೆಬಾಳ