ಮಾರಬೇಡಿ ಮತಗಳ

ಮಾರಬೇಡಿ ಮತಗಳ

ಜನತಂತ್ರ ಮಹತ್ವದ ಚುನಾವಣೆ
ರಾಜಕಾರಣಿಗಳಿಗೆ ಆಕರ್ಷಣೆ
ಬಹುಮತಗಳ ಕಾತುರ ನಿರೀಕ್ಷಣೆ

ರಾಜಕಾರಣಿಗಳ ಸ್ಪರ್ಧೆಯಪರೀಕ್ಷೆ
ನ್ಯಾಯ ನೀತಿ ಪ್ರಣಾಳಿಕೆಯನಿರಿಕ್ಷೆ
ಜನತೆಯ ಮನಸಿನ ಅಪೇಕ್ಷೆ

ರಾಜಾಧಿರಾಜ ಜಾಣ ಮತದಾರ
ಆಕಾಶಕೇರಿಸಿ ನೆಲಕಪ್ಪಳಿಸುವವ
ಜಾಗ್ರತೆಯಿರಲಿ ರಾಜಕಾರಣಿಗಳೆ

ಮತ ಹಾಕುವದು ಮೂಲ ಹಕ್ಕು
ಬಿಡಿಸಿರಿ ರಾಜಕೀಯದ ಸಿಕ್ಕು
ಜಾಗ್ರತರಾಗಿರಿ ನವ ಯುವಕರೆ

ಸೀರೆ,ಕುಕ್ಕರ, ಕಂತೆಗಟ್ಟಲೆ ಹಣ
ಕೊಟ್ಟು ಗೆಲ್ಲುವರು ನಿಮ್ಮ ಮನ
ಬಲಿಯಾಗಬೇಡಿ ಮದ್ಯಪಾನಕೆ

ನಂಬಬೇಡಿ ಸುಳ್ಳು ಆಶ್ವಾಸನೆ ಮರುಳಾಗದಿರಿ ಪೊಳ್ಳು ಘೋಷಣೆ
ಮಾಡಿಕೊಳ್ಳಿರಿ ಆತ್ಮ ಪರೀಕ್ಷಣೆ

ಮೂಲಭೂತ ಪ್ರಶ್ನೆ ಬಿಡಿಸುವವರ
ಅನ್ನ ಅಕ್ಷರ ಆಶ್ರಯಕೊಡುವವರ
ದೇಶದ ವಿಕಾಸ ಮಾಡುವವರನು

ಆರಿಸಿ ಮತ ಹಾಕಿರಿ ಒಂದೊಂದು
ನಿಮ್ಮಮತವೂ ಬೆಲೆಯುಳ್ಳದ್ದು ಆಶೆಗಾಗಿ ಮಾರಬೇಡಿ ಮತಗಳ

ಯಾರು ಭೃಷ್ಟರು ಯಾರು ಶಿಷ್ಟರು
ಕಟ್ಟೆಚ್ಚರವಹಿಸಿ ಮತಗಟ್ಟೆಗಳಲಿ
ನ್ಯಾಯಕಾಗಿ ದಿಟ್ಟತನದಿ ಹೋರಾಡಿ

ಅಟ್ಟಹಾಸದಿ ಮೆರೆಯುವವರನು
ಕಟ್ಟಿಹಾಕಿ ನಿಮ್ಮ ಮತಗಳಿಂದ
ಸುಟ್ಟು ಹೋಗುವಂತೆ ಅಹಂಕಾರ

ವಂಚಕರ ಸಂಚು ಅರಿತುಕೊಳ್ಳಿ
ಮಿಂಚಿನೋಟದಿ ಕಾರ್ಯ ಮಾಡಿ
ನೋಟಿಗಾಗಿ ಓಟು ಮಾರಬೇಡಿ

ದೊರಕಿಲ್ಲ ನಿರ್ಭಯಾಳಿಗೆಅಭಯ
ಬಡವರಿಗೆ ಇನ್ನೂಸಿಕ್ಕಿಲ್ಲ ಸಹಾಯ
ಜಾತಿಭೇದ ಗಲಭೆ ನಡೆದೇ ಇದೆ

ಸಾಮಾನ್ಯ ಅಸಾಮಾನ್ಯನಾದಾಗ
ಮಂತ್ರಿಗಳ ಕುತಂತ್ರವನರಿತಾಗ
ಅವರ ಅಧಃಪತನ ಖಂಡಿತ ತಿಳಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆ

Don`t copy text!