ಸೈನಿಕ ಮತ್ತು ಅರೆಸೈನಿಕ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಸೈನಿಕ ಮತ್ತು ಅರೆಸೈನಿಕ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಕಲ್ಯಾಣ ಕರ್ನಾಟಕ ಭಾಗದ ಅರ್ಹ ಯುವಕರಿಂದ ಸೈನಿಕ ಮತ್ತು ಅರಸನಿಕ ತರಬೇತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಸೂಕ್ತ ದಾಖಲೆಗಳೊಂದಿಗೆ ವೆಬ್ ಸೈಟ್ ವಿಳಾಸ WWW.KKHRACS.COM ಗೆ ಭೇಟಿ ನೀಡಿ. ಪ್ರಾರಂಭಿಕ ದಿನಾಂಕ 21-02-2023ರಿಂದ 27-02-2023 ರ ಸಂಜೆ 5.30 ರವರೆಗೆ.

ಅರ್ಜಿ ಸಲ್ಲಿಸಿದವರಿಗೆ ದೈಹಿಕ ಅರ್ಹತಾ ಪರೀಕ್ಷೆಯನ್ನು ದಿನಾಂಕ 1-03-23 ರಂದು ಗ್ಲೋಬಲ್ ಸೈನಿಕ ಅಕಾಡೆಮಿ ಬೀದರ್ ನಲ್ಲಿ ನಡೆಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವವರು ದಿನಾಂಕ 01-03 23 ರಂದು ಜರುಗುವ ದೈಹಿಕ ಪರೀಕ್ಷೆಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಿ ತರಬೇತಿಗೆ ನೊಂದಾಯಿಸಿಕೊಂಡು ಹಾಜರಾಗಬಹುದು.

ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು ಬರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗಳ ಮೂಲ ಪ್ರತಿ ಹಾಗೂ ಒಂದು ನಕಲು ಪ್ರತಿ ಜಾತಿ ಆದಾಯ ಪ್ರಮಾಣ ಪತ್ರ ,ಆಧಾರ್ ಕಾರ್ಡ್ ,ರನ್ನಿಂಗ್ ಶೂ,
ಟಿ ಶರ್ಟ್, ರನ್ನಿಂಗ್ ನಿಕ್ಕರ್ ನೊಂದಿಗೆ ಹಾಜರಾಗತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 08472-266601,
8095799799 ಮತ್ತು
9900438183 ಆಗಿದ್ದು ಕಛೇರಿ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 05 ಗಂಟೆಯವರೆಗೆ ಸಂಪರ್ಕಿಸಬಹುದು.

Don`t copy text!