ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆ : ಸಂಭ್ರಮಾಚರಣೆ
e-ಸುದ್ದಿ ಮಸ್ಕಿ
ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಯಿಂದಾಗಿ ರಾಜ್ಯದ ಹಡಪದ ಸಮಾಜದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ . ಸಮಾಜದ ಮನವಿಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಬಸವರಾಜ ಬೊಮ್ಮಾಯಿ ರವರು ನಿಗಮ ಘೋಷಣೆ ಮಾಡಿದ್ದು ಇಡೀ ರಾಜ್ಯದ ಹಡಪದ ಸಮಾಜ ಸಂಭ್ರಮಿಸುವಂತೆ ಮಾಡಿದೆ. ನಿಗಮ ಘೋಷಣೆಯಿಂದಾಗಿ ಹಡಪದ ಸಮಾಜವು ಶೈಕ್ಷಣಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಶ್ರೀ ಮಹಾಬಲೇಶ್ವರ ಬಳಗಾನೂರು ತಿಳಿಸಿದರು
ತಾಲೂಕಿನ ಹಡಪದ ಸಮಾಜದವರು ಇಂದು ಮಸ್ಕಿಯ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಿಜೆಪಿಯ ಯುವ ಮುಖಂಡರಾದ ಪ್ರಸನ್ನ ಪಾಟೀಲ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಎಲ್ಲರೂ ಪರಸ್ಪರ ಸಿಹಿ ಹಂಚಿ ಪಟಾಕಿ ಹಚ್ಚಿ ವಿಜಯೋತ್ಸವ ಆಚರಿಸಿದರು .
ಈ ಸಂದರ್ಭದಲ್ಲಿ ಪ್ರಸನ್ನ ಪಾಟೀಲ್ ರವರು ತುಂಬಾ ಹರ್ಷ ವ್ಯಕ್ತಪಡಿಸಿ ಹಡಪದ ಸಮಾಜಕ್ಕೆ ನಿವೇಶನ ಕೊಡಿಸುವ ಭರವಸೆ ನೀಡಿದರು.
ಜಿಲ್ಲಾಧ್ಯಕ್ಷರಾದ ಶ್ರೀ ಮಹಾಬಲೇಶ್ವರ ಬಳಗಾನೂರು ಹಾಗೂ ಉಪಾಧ್ಯಕ್ಷರಾದ ಶ್ರೀ ಗದ್ಯಪ್ಪ ಜಕ್ಕೇರಮಡು ರವರು ಮಾನ್ಯ ಮುಖ್ಯಮಂತ್ರಿಗಳ ಆದೇಶವನ್ನು ಮುಕ್ತ ಕಂಠದಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುದುಗಲ್ಲಿನ ಅಧ್ಯಕ್ಷರಾದ ಶ್ರೀ ಗುಂಡಪ್ಪ, ಮಸ್ಕಿ ಅಧ್ಯಕ್ಷರಾದ ಗುಂಡಪ್ಪ ಕಟ್ಟಿಮನಿ, ಉಪಾಧ್ಯಕ್ಷರಾದ ಚಂದ್ರಶೇಖರ್ ಸಾನಬಾಳ, ನಾಗರಾಜ್ ಕಟ್ಟಿಮನಿ,ಪಂಪಣ್ಣ ಗಬ್ಬೂರು, ಅಮರೇಶ್ ಟೈಲರ್, ತಿಪ್ಪಣ್ಣ ಟೈಲರ್, ಅಮರೇಶ್, ಹನುಮಂತಪ್ಪ ಸರ್ಜಾಪುರ್, ಶಿವಪ್ಪ ಕಟ್ಟಿಮನಿ, ಶರಣಪ್ಪ ಮೆದಿಕಿನಾಳ , ಮೌನೇಶ್ ಜಂಗ್ರಹಳ್ಳಿ , ಮೌನೇಶ್ ಬುದ್ದಿನ್ನಿ, ನಾಗರಾಜ್ ಸಂತೆಕಲ್ಲೂರು, ವೀರೇಶ್ ಗಬ್ಬೂರು, ರಮೇಶ್ ಮುದುಗಲ್ಲ, ತಿಪ್ಪಣ್ಣ ಮುದುಗಲ್, ದೇವರಾಜ ಉದ್ವಾಳ, ಶರಣಬಸವ ಉದ್ವಾಳ, ವೀರೇಶ ಚನ್ನಬಸಪ್ಪ, ದೇವರಾಜ್ ಕ್ಯಾತ್ನಟ್ಟಿ, ವೀರೇಶ್ SVS, ಮಲ್ಲಿಕಾರ್ಜುನ, ಶಿವು ಮುಂತಾದವರು ಉಪಸ್ಥಿತರಿದ್ದರು.