ಪ್ರಜಾಧ್ವನಿಯಾತ್ರೆಯ ನಿಮಿತ್ಯ ಹುನಗುಂದ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೈಕ್ ರ್ಯಾಲಿ ….
e-ಸುದ್ದಿ ವರದಿ:ಹುನಗುಂದ
ಹುನಗುಂದ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಯಾತ್ರೆ ಇಂದು ಹುನಗುಂದ ನಗರದ ಟಿಸಿಎಚ್ ಕಾಲೇಜು ಆವರಣ ಕಾರ್ಯಕ್ರಮ ನಡೆಯಲಿದೆ.
ಹಿಗಾಗಿ ಇಳಕಲ್ ನಗರ ಹಾಗೂ ಹುನಗುಂದ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮೂಕಾಂತರ ಸಮಾವೇಶಕ್ಕೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಆಗಮಿಸಿದರು.
ಈ ಸಂದರ್ಭದಲ್ಲಿ ಹುನಗುಂದ ಇಳಕಲ್ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ವರದಿಗಾರರು: ಶರಣಗೌಡ ಕಂದಕೂರ