ಉಳವಿ

ಉಳವಿ…..

ಉಳವಿ ಕ್ಷೇತ್ರವು ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಸುಪಾ ತಾಲ್ಲೂಕಿನ ದಕ್ಷಿಣಕ್ಕೆ 35 km ದೂರದಲ್ಲಿದೆ. ಯಲ್ಲಾಪುರ ಸಮೀಪದ ಗ್ರಾಮ. ಬೆಳಗಾವಿಯಿಂದ ಸುಮಾರು 135 km ದೂರದಲ್ಲಿದೆ. ಪುರಾತನ ಸ್ಥಳ ಹಾಗೂ ಲಿಂಗಾಯತರ ಪವಿತ್ರ ಯಾತ್ರಾಸ್ಥಳ. ಇಲ್ಲಿ ಪ್ರತಿಷ್ಠಿತ ಚನ್ನಬಸವೇಶ್ವರ ದೇವಾಲಯವಿದೆ. ಇದು ಚನ್ನಬಸವಣ್ಣರ ಸಮಾಧಿ ಸ್ಥಳ.
ಬಸವಣ್ಣನವರ ಅಳಿಯನಾದ ಚನ್ನಬಸವಣ್ಣರು ತಾಯಿ ನಾಗಲಾoಬಿಕೆ ಹಾಗೂ ಇತರ ಶರಣರೊಂದಿಗೆ ಉಳಿದ ಈ ಪ್ರದೇಶ ಉಳವಿ ಎಂಬ ಹೆಸರಾಯಿತು. ಕದಂಬರು ಅವರಿಗೆ ಆಶ್ರಯ ನೀಡುತ್ತಾರೆ.
12ನೇ ಶತಮಾನದ ಶರಣ ಸಮೂಹದಲ್ಲಿ ಅಗ್ರಗಣ್ಯವಾದ ಹೆಸರು ಚನ್ನಬಸವಣ್ಣರದು. ಆ ಶತಮಾನದ ಯುಗಪುರುಷನೂ, ಸಾಮಾಜಿಕ ಬದಲಾವಣೆಯ ಹರಿಕಾರನೂ, ಅಸಮಾನತೆಯ ವಿರುದ್ಧ ಧ್ವನಿ ಎತ್ತಿ, ವ್ಯವಸ್ಥೆಯ ಆಕ್ರೋಶಕ್ಕೆ ಗುರಿಯಾದವನು ಬಸವಣ್ಣನವರ ಸೋದರಳಿಯ ಚನ್ನಬಸವಣ್ಣ.

ಇವರು ಸ್ವಸಾಮರ್ಥ್ಯ ಮತ್ತು ಸಾಧನೆಗಳಿಂದ ಹೆಸರಾದವರು.
ಚನ್ನಬಸವಣ್ಣನವರು ಲಿಂಗಾಯತ ಧರ್ಮದ ಸಾಂಪ್ರದಾಯಿಕ ವಚನಗಳನ್ನು ಪರಿಷ್ಕರಿಸಿದವರಲ್ಲಿ ಪ್ರಮುಖರು ಹಾಗೂ ಮೊದಲಿಗರು.
ಕಲ್ಯಾಣದ ಕ್ರಾಂತಿಯ ನಂತರ ಕಲ್ಯಾಣದಲ್ಲಿದ್ದ ಶರಣರಿಗೆ ನೆಲೆ ತಪ್ಪಿ ದಿಕ್ಕು ದಿಕ್ಕಿಗೆ ಚದುರಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಶರಣರ ಬಹುದೊಡ್ಡ ಗುಂಪು ಚನ್ನ ಬಸವಣ್ಣನ ನೇತೃತ್ವದಲ್ಲಿ ಉಳವಿಗೆ ಬಂದರು. ಚಿಕ್ಕ ವಯಸ್ಸಿಗೆ ಇಂಥ ಗುರುತರ ಹೊಣೆಗಾರಿಕೆಯನ್ನು ಕಷ್ಟದಿಂದ ನಿಭಾಯಿಸಿದರು. ಚನ್ನಬಸವಣ್ಣ ನವರು ಬದುಕಿದ್ದು ಸ್ವಲ್ಪಕಾಲ. ಆದರೂ ಸಾಧಿಸಿದ್ದು. ಕೀರ್ತಿಶಾಲಿಯಾಗಿದ್ದು ಹೆಚ್ಚು. ವೀರಶೈವ ಧರ್ಮದ ಭವಿಷ್ಯತ್ತಿನ ಯೋಜನೆ ರೂಪಿಸಿ ಧರ್ಮ ಪ್ರಚಾರ ಮಾಡಿದ್ದರು.
ಇಲ್ಲಿರುವ ಚನ್ನಬಸವಣ್ಣನವರ ಗದ್ದುಗೆಗೆ ನಿತ್ಯ ರುದ್ರಾಭಿಷೇಕ ನಡೆಯುತ್ತದೆ. ಪ್ರತಿ ವರ್ಷ ಮಾಘಮಾಸದ ಭರತ ಹುಣ್ಣಿಮೆಗೆ ಜಾತ್ರೆ ನಡೆಯುತ್ತದೆ.
ಚನ್ನಬಸವಣ್ಣ ಪ್ರಸಾದ ನಿಲಯದಲ್ಲಿ ನಿತ್ಯ ಎರಡೂ ಸಮಯ ದಾಸೋಹ ಇರುತ್ತದೆ.
ಉಳವಿಯ ಪಶ್ಚಿಮ ಘಟ್ಟವು ದಟ್ಟ ಕಾಡು ಹೊಂದಿದೆ. ಇಲ್ಲಿ ಹುಲಿ. ಚಿರತೆ. ಆನೆ. ಸಾರಂಗ ಇತರ ವನ್ಯ ಜೀವಿಗಳಿಂದ ಸಮೃದ್ಧವಾಗಿದೆ.
ಉಳವಿ ಪ್ರಾಕೃತಿಕ ಸೊಬಗಿಗೂ ಹಾಗೂ ಗುಹೆ ಗಳಿಗೂ ಹೆಸರುವಾಸಿಯಾಗಿದೆ. ಉಳವಿಯಿಂದ ಸುಮಾರು 10 km ದೂರದಲ್ಲಿ ನಿಸರ್ಗ ನಿರ್ಮಿತ ಗುಹೆಗಳಿವೆ. ಆ ಗುಹೆಗಳಿಗೆ ಶರಣರ ಹೆಸರುಗಳನ್ನ ಇಡಲಾಗಿದೆ.
ಅಕ್ಕನಾಗಮ್ಮಗವಿ
ಆಕಳ ಗವಿ
ಮಹಾಮನೆ ಗವಿ
ಚನ್ನಬಸವ ಜಲಪಾತ
ಹರಳಯ್ಯನ ಚಿಲುಮೆ
ವಿಭೂತಿ ಕಣಜ.
ಹೀಗೆ ಹೆಸರಾಂತ ಗವಿಗಳಿವೆ. ಆ ಗವಿಗಳ ದಾರಿ ದುರ್ಗಮ ವಾಗಿದ್ದು ಚಾರಣಪ್ರಿಯರಿಗೆ. ಸಾಹಸ ಪ್ರಿಯರ ನೆಚ್ಚಿನ ತಾಣ.
ಪ್ರಕೃತಿಯ ಮಡಿಲಲ್ಲಿರುವ, ಪವಿತ್ರ ಸ್ಥಳವಾದ ಉಳವಿ ಮತ್ತೆ ಮತ್ತೆ ನೋಡಬೇಕೇನಿಸುವ ತಾಣ.

✍️ಶ್ರೀಮತಿ. ವಿದ್ಯಾ. ಹುಂಡೇಕರ.

Don`t copy text!