ಮಾ.೧ ರಿಂದ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ- ಶಂಕರಗೌಡ ಪಾಟೀಲ
e-ಸುದ್ದಿ ಮಸ್ಕಿ
ರಾಜ್ಯ ಸರ್ಕಾರ ನೌಕರರ ವೇತನ ಪರಿಷ್ಕರಣೆ ಮತ್ತು ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸರ್ಕಾರಿ ನೌಕರರ ಸಂಘ ಮಾಡಿತ್ತು. ಸರ್ಕಾರ ಅಧಿವೇಶನದಲ್ಲಿ ಸರ್ಕಾರಿ ನೌಕರರ ಬೇಡಿಕೆ ಬಗ್ಗೆ ಸಮರ್ಪಕ ನಿರ್ಧಾರ ತೆಗೆದುಕೊಳ್ಳದ ಕಾರಣ ಮಸ್ಕಿ ತಾಲ್ಲೂಕಿನ ಸರ್ಕಾರದ ಎಲ್ಲಾ ಇಲಾಖೆಯ ಸಿಬ್ಬಂದಿ ಮಾ.೧ ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶಂಕರಗೌಡ ಪಾಟೀಲ ತಿಳಿಸಿದರು.
೭ನೇ ವೇತನ ಆಯೋದದಿಂದ ಶೀಘ್ರವಾಗಿ ಮಧ್ಯಂತರ ವರದಿಯನ್ನು ಪಡೆದು ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲು ಶೇ೪೦ ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು ಕೊಡಬೇಕು. ರಾಜ್ಯದಲ್ಲಿ ಎನ್.ಪಿ.ಎಸ್ ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿದ್ದು ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕೂಡಲೇ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮಾ.೧ ರಿಂದ ಅನಿರ್ಧಿಷ್ಟಾವಧಿ ಮುಷ್ಕರ್ ನಡೆಸುವುದಾಗಿ ತಿಳಿಸಿದರು.
ಮಲ್ಲಯ್ಯ ಕಟ್ಟಿಮನಿ, ಬಾಲಸ್ವಾಮಿ, ದಾವುದ್ ಪಂಪಾಪತಿ, ಚನ್ನವೀರ ಜೋತಾನ, ಈರಪ್ಪ, ಜ್ಯೋತಿಬಾಯಿ, ತಿಪ್ಪಣ್ಣ ಕೊಳ್ಳಿ, ಅಮರೇಶ, ಬಸನಗೌಡ, ಆಲಂಪಾಷಾ, ಶ್ರೀನಿವಾಸ, ಹುಸೇನಸಾಬ ಗುರಿಕಾರ ಹಾಗೂ ಇತರರು ಇದ್ದರು.