ಶ್ರೀ ವಿಜಯ ಚಂದ್ರಶೇಖರ ಮಹಾಸ್ವಾಮಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ..

 ಶ್ರೀ ವಿಜಯ ಚಂದ್ರಶೇಖರ ಮಹಾಸ್ವಾಮಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ..

e-ಸುದ್ದಿ ವರದಿ:ಮುದೇನೂರ

ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮ ಧಾರ್ಮಿಕ ಕ್ಷೇತ್ರದ ಮೂಲಕ ಇಡೀ ನಾಡಿಗೆ ಚಿರಪರಿಚಿತ, ಅದೇ ರೀತಿ ಲಿಂಗೈಕ್ಯ ಚಂದ್ರಶೇಖರ್ ಮಹಾಸ್ವಾಮಿಗಳವರ ಹೆಸರಿನಲ್ಲಿ ಪ್ರಾರಂಭವಾದ ಶ್ರೀ ವಿಜಯ ಚಂದ್ರಶೇಖರ ಕಿರಿಯ ಪ್ರಾಥಮಿಕ ಶಾಲೆಯ ಕೂಡ ಉತ್ತಮ ಶಕ್ಷಣ  ನೀಡುವ ಮೂಲಕ ಶಿಕ್ಷಣ ರಂಗದಲ್ಲಿಯೂ ಕೂಡ ಗ್ರಾಮ ಚಿರಪರಿಚಿತವಾಗುತ್ತಿದೆ.

ಶ್ರೀ ವಿಜಯ ಚಂದ್ರಶೇಖರ ಮಹಾಸ್ವಾಮಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ..   ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಪೂಜ್ಯರು ಉದ್ಘಾಟಿಸಿದರು.
ಕಾರ್ಯಕ್ರಮದ ವಿಶೇಷತೆ ಏನೆಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ ಅನೇಕ ಜನರನ್ನು ಸತ್ಕರಿಸಿದರು. ಅಲ್ಲದೆ ಇಡೀ ಗ್ರಾಮವನ್ನು ದೇವಾಲಯವನ್ನು ಸೂಚಿಗೊಳಿಸುವ ಪೌರಕಾರ್ಮಿಕರನ್ನು ಸತ್ಕರಿಸುವ ಮೂಲಕ ವಿಶಿಷ್ಟತೆ ಮೆರೆದರು.

ಪೂಜ್ಯರ ಆಶೀರ್ವಚನದ ನಂತರ ಶಾಲೆಯ ಮಕ್ಕಳ ಮನರಂಜನೆ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.
ದೇಶಭಕ್ತಿ ಗೀತೆ, ಭಕ್ತಿ ಗೀತೆ, ಕನ್ನಡ ನಾಡು ನುಡಿಯ ಗೀತೆಗಳು ನೋಡುಗರ ಗಮನ ಸೆಳೆದವು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು ಶಾಲೆಯ ಆಡಳಿತ ಮಂಡಳಿಯವರು
ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!