“1 RAಬರಿ ಕಥೆ” ಮುಂದಿನ ತಿಂಗಳು ತೆರೆಗೆ….
e-ಸುದ್ದಿ ಇಳಕಲ್
ಇಳಕಲ್; ‘ಸಮನ್ವಿ ಕ್ರಿಯೇಷನ್ಸ್ ಬೇಲೂರು’ ಚಿತ್ರ ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರ
“1RAಬರಿ ಕಥೆ” ಈಗಾಗಲೇ ತನ್ನ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವ ಪಕ್ಕಾ ಮಾಸ್ ಕರ್ಷಿಯಲ್ ರೊಮ್ಯಾಂಟಿಕ್, ಕಾಮಿಡಿ, ಆಕ್ಷನ್,ಸಸ್ಪೆನ್ಸ್- ಥ್ರಿಲ್ಲರ್ ಸೆಂಟಿಮೆಂಟ್ ಕಥೆ ಒಳಗೊಂಡ ಚಿತ್ರ ಇದಾಗಿದೆ.
ಬಹುತಾರಾಗಣ ಹೊಂದಿರುವ ಈ ಚಿತ್ರದಲ್ಲಿ ರಕ್ಕಂ ಖ್ಯಾತಿಯ ರಣಧೀರ್ ಗೌಡ ನಾಯಕನಾಗಿದ್ದು, ಹೊಸ ಪ್ರತಿಭೆ ರಿಷ್ವಿ ಭಟ್ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಸುಂದರ್ ರಾಜ್, ಕರಿಸುಬ್ಬು, ಕಡ್ಡಿಪುಡಿ ಚಂದ್ರು, ಶಿವರಾಜ್ ಕೆ. ಆರ್. ಪೇಟೆ, ತಬಲಾ ನಾಣಿ, ಸಂಪತ್ ಮೈತ್ರೇಯ, ಜಹಾಂಗೀರ್, ಗಿರೀಶ್ ಶಿವಣ್ಣ, ಮೂಗ್ ಸುರೇಶ್, ಎಂ.ಕೆ. ಮಠ್, ನವೀನ್ ಪಡೀಲ್, ಸಂಜುಬಸಯ್ಯ ಮತ್ತು ಗೋಕಾಕ್ ನ ಪ್ರಕಾಶ್ ಕುರಭೇಟ್ ಹಾಗೂ ಕಿರುತೆರೆ, ಮಜಾಟಾಕೀಸ್ ನಟರು ಇದ್ದಾರೆ.
ಗೋಪಾಲ್ ಹಳ್ಳೇರ್ ಹೊನ್ನಾವರ ಕಥೆ, ಚಿತಗರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಬಂಡವಾಳ ಹಾಕಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹರೀಶ್ ಜಿಂದೆ ಅವರ ಛಾಯಾಗ್ರಹಣ, ಸಂಜಿವರೆಡ್ಡಿ ಅವರ ಸಂಕಲನ, ಶ್ರೀವತ್ಸ ಅವರ ಸಂಗೀತ ಇದ್ದು, ಗೋಪಾಲ್ ಹಳ್ಳೇರ್ ಮತ್ತು ಪ್ರಕಾಶ್ ಜಿ. ಸಾಹಿತ್ಯ ಬರೆದಿದ್ದಾರೆ. ಡಾ.ಡಿಫರೆಂಟ್ ಡ್ಯಾನಿ ಸಾಹಸ, ಮತ್ತು ಸಿ. ಚಾಮರಾಜ್, ರೋಹಿತ್ ಅರುಣ್ ಅವರ ಕೊರಿಯೋಗ್ರಫಿ ಈ ಚಿತ್ರಕ್ಕಿದೆ.
ವರದಿಗಾರರು: ಶರಣಗೌಡ ಕಂದಕೂರ