ಬೆಂಡೋಣಿ ಸರ್ಕಾರಿ ಶಾಲೆಯಲ್ಲಿ ನಡೆದ ಪವಾಡ ರಹಸ್ಯ ಬಯಲು ಕಾರ್ಯಕ್ರಮ.
e-ಸುದ್ದಿ ಲಿಂಗಸುಗೂರು
ಲಿಂಗಸಗೂರು ತಾಲೂಕಿನ ಬೆಂಡೋಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ಹಾಗೂ ಮೂಢನಂಬಿಕೆಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ವಿಜ್ಞಾನ ಶಿಕ್ಷಕ ಚಂದ್ರುರವರ ಮಾರ್ಗದರ್ಶನದ ಅಡಿಯಲ್ಲಿ ಶಾಲೆಯ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪವಾಡ ಬಯಲು ರಹಸ್ಯ ಕಾರ್ಯಕ್ರಮಗಳನ್ನು ಎಲ್ಲರಿಗೂ ಮಾಡಿ ತೋರಿಸಿ ಅದರಲ್ಲಿರುವ ವೈಜ್ಞಾನಿಕ ತತ್ವವನ್ನು ಶಿಕ್ಷಕರು ತಿಳಿಸುವುದರ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಕಾರ್ಯಕ್ರಮವನ್ನು ಮಾಡಿದರು.
ವಿದ್ಯಾರ್ಥಿಗಳು ಕರ್ಪೂರವನ್ನು ಕೈಯಲ್ಲಿ ಉರಿಸುವುದು, ತೆಂಗಿನಕಾಯಿಯಲ್ಲಿ ರಕ್ತಭರಿಸುವುದು, ನಿಂಬೆಹಣ್ಣಿನಲ್ಲಿ ರಕ್ತಬರಿಸುವುದು,
ಕಾಯಿಗಳಲ್ಲಿ ಹೂಗಳನ್ನು ಬರೆಸುವುದು, ನಾಣ್ಯಗಳನ್ನು ಮಾಯ ಮಾಡುವುದು, ಬೆಂಕಿ ಪಟ್ಟಣದಲ್ಲಿ ಬೆಂಕಿ ಕಡ್ಡಿಗಳಿಲ್ಲದೆ ಕಡ್ಡಿಗಳ ಶಬ್ದ ಮಾಡಿಸುವುದು, ಚಾಕುವಿನಿಂದ ತುಂಬಿದ ಚರಿಗೆಯನ್ನು ಹಾಗೂ ಕೊಡವನ್ನ ಮೇಲಕ್ಕೆ ಎತ್ತುವುದು, ಬಾಲ್ ಚಲಿಸುವಂತೆ ಹಾಗೂ ಮಂತ್ರದಿಂದ ನಿಲ್ಲುವಂತೆ ಮಾಡುವುದು ಕಲ್ಲುಗಳನ್ನು ಆಯಸ್ಕಾಂತ ಮಾಡುವುದು ತೆಂಗಿನ ಕಾಯಿಯಿಂದ ಅಂತರ್ಜಲ ತಿಳಿಸಿ ಬೋರ್ವೆಲ್ ಹಾಕಿಸುವುದನ್ನು ಹೇಳುವುದು, ಹೀಗೆ ಹಲವಾರು ಪವಾಡಗಳನ್ನು ಮಾಡಿ ತೋರಿಸುವುದರ ಜೊತೆಗೆ ಅವುಗಳಲ್ಲಿರುವ ವೈಜ್ಞಾನಿಕ ಸತ್ಯತೆಯನ್ನು ತಿಳಿಸಿ ಮಕ್ಕಳಲ್ಲಿ ಮೂಢನಂಬಿಕೆಗಳನ್ನು ತೊಡೆದ ಹಾಕುವ ನಿಟ್ಟಿನಲ್ಲಿ ವಿಜ್ಞಾನ ಶಿಕ್ಷಕರ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಲಾಯಿತು.
ಅತಿಹೆಚ್ಚಿನ ಪವಾಡಗಳನ್ನು ಮಾಡಿರುವ ವಿದ್ಯಾರ್ಥಿಗಳಿಗೆ ಶ್ರೀಮತಿ ಸುನಿತಾ ಮೇಡಂ ರವರು ಅಂಕಗಳನ್ನು ನೀಡಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಆಯ್ಕೆ ಮಾಡಿ, ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು.
ಮಕ್ಕಳು ತುಂಬಾ ಖುಷಿಯಿಂದ ಪವಾಡಗಳನ್ನು ಮಾಡಿ ಸಂತಸವನ್ನು ಹಂಚಿಕೊಂಡರು.
ವೈಜ್ಞಾನಿಕ ಮನೋಭಾವ ಮೂಡಿಸುವ ಪವಾಡ ಮಾಡಿದ ವಿದ್ಯಾರ್ಥಿಗಳು ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ತೊಡೆದು ಹಾಕುವಲ್ಲಿ ತಾವು ಶ್ರಮಿಸಬೇಕು ಹಾಗೂ ನೀವು ವಿಜ್ಞಾನಿಗಳಾಗಬೇಕೆಂದು ಆ ನಿಟ್ಟಿನಲ್ಲಿ ನೀವು ಅಧ್ಯಯನಶೀಲರಾಗಿ ಯಶಸ್ವಿಯಾಗಬೇಕೆಂದು ವಿಜ್ಞಾನ ಶಿಕ್ಷಕ ಚಂದ್ರು ರವರು ಮಕ್ಕಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಪರಮಣ್ಣ ಹಾಗೂ ಶಿಕ್ಷಕರಾದ ಸುನೀತ ವಿಜ್ಞಾನ ಶಿಕ್ಷಕ ಚಂದ್ರು ಹಾಗೂ ಇತರರು ಇದ್ದರು.