ಮೌನದಲಿ ಮಾತು

ಮೌನದಲಿ ಮಾತು

ಕಣ್ಣಸನ್ನೆಯಲಿ ದೃಷ್ಟಿ ಬೆರೆತು
ಮೌನದಲ್ಲಿ ಸೆಳೆದ ಮಾತು
ಮನದಿ ಹೊಸರಾಗ ಹೊಮ್ಮಿದೆ
ಮೈ ಮರೆಯುವುದ ಕಂಡಿದೆ

ಮನದ ಮಿಡಿತ ಕೇಳಲೆಂದು
ಪ್ರೀತಿಯ ಬಲೆ ಬೀಸಿಬಂದು
ಹಾವ ಭಾವ  ತಿಳಿಸಿತಂದು
ಮೌನದಲಿ ಮಾತು ಬೆಸೆಯಿತು

ಪಿಸುಮಾತು ಆಡದಿರಲು
ಮೌನದಿ ಮನ ಕೇಳಲು
ಕವನವಾಗಿ ಮೌನ ಭಾವ
ಬೆರಳಿನಿಂದ ಅರಳಿತು

ತಾಳ್ಮೆಯ ಪರಿಕ್ಷೆ ಪರಿಚಿಸುವಲ್ಲಿ
ಮೌನದ ಶಕ್ತಿ ಸಾಧಿಸುವಲ್ಲಿ
ಮೌನದಲಿಯ ಮಾತು
ಸೋತು ಗೆದ್ದಿತಲ್ಲಿ

ಮಾತು ಮುಗಿದ ತಕ್ಷಣ
ಮೌನ ಆವರಿಸಿದ ಕ್ಷಣ
ಕಣ್ಣಂಚಿನ ಕಂಬನಿಯೊಂದು
ಮನದ ವೇದನೆ ತಿಳಿಸಿತು

ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

Don`t copy text!