ಶಿವಾಜಿ ಪ್ರತಿಮೆಯ ಅದ್ದೂರಿ ಮೆರವಣಿಗೆ
ಮಸ್ಕಿ: ವಿಶ್ವಗುರು ಭಾರತ ಮಾಡಲು ಕಂಕಣಬದ್ಧರಾಗಿ ; ಚೈತ್ರಾ ಕುಂದಾಪೂರ
e-ಸುದ್ದಿ ಮಸ್ಕಿ
ಮಸ್ಕಿ: ಭಾರತವನ್ನು ವಿಶ್ವಗುರು ಮಾಡಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಂಕಣ ಬದ್ಧರಾಗಬೇಕಾದ ಕಾಲ ಬಂದಿದೆ ಎಂದು ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪೂರ ಕರೆ ನೀಡಿದರು.
ಪಟ್ಟಣದ ತೇರಿನ ಮನೆ ಹತ್ತಿರ ಶನಿವಾರ ಭಜರಂಗ ದಳ ಹಾಗೂ ವಿಶ್ವಹಿಂದೂ ಪರಿಷತ್ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಶಿವಾಜಿ ಜಯಂತಿ ಎಂದರೆ ಕೆಲವರಿಗೆ ಹೊಟ್ಟೆ ಉರಿ, ಶಿವಾಜಿ ಇರದಿದ್ದರೆ ಇವತ್ತು ಹಿಂದೂ ಸಮಾಜ ಮತಾಂತರವಾಗಿ ನಾಶವಾಗುತ್ತಿತ್ತು ಎಂದರು.
ಅಖಂಡ ಹಿಂದೂ ಸಮಾಜಕ್ಕೆ ತನ್ನ ಜೀವನವನ್ನು ಮುಡುಪಾಗಿಟ್ಟ ಶಿವಾಜಿ ಅವರನ್ನು ಕನ್ನಡಿಗರು ಅಲ್ಲ ಎಂಬ ಬೇಧ ಹುಟ್ಟು ಹಾಕುವವರಿಗೆ ಪಾಠ ಕಲಿಸಬೇಕು. ಶಿವಾಜಿ ಇರದಿದ್ದರೆ ಇವತ್ತು ಹಿಂದೂ ದೇವಸ್ಥಾನಗಳು ಇರುತ್ತಿರಲಿಲ್ಲ ಎಂದರು.
ಹಿಂದೂ ಸಮಾಜದ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮನೆ ಮಕ್ಕಳು ಯಾರೊಂದಿಗೆ ಸ್ನೇಹ ಬೆಳೆಸಿದ್ದಾರೆ ಎಂಬುದರ ಬಗ್ಗೆ ಗಮನ ಕೊಡಬೇಕು. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಈ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು, ಭಾರತವನ್ನು ಇಸ್ಲಾಮ್ ರಾಷ್ಟ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಸ್ಕಿ ತಾಲ್ಲೂಕಿನ ಸುತ್ತಮುತ್ತ ಜಿಯಾದಿ ಹೆಸರಿನಲ್ಲಿ ಶಕ್ತಿಗಳು ತಲೆ ಎತ್ತುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸಮಾಜ ಜಾಗೃತರಾಗಬೇಕಾಗಿದೆ, ರಾಜಕಾರಣಿಗಳು ಶಿವಾಜಿ ಅವರ ಬದುಕನ್ನು ಅರ್ಥ ಮಾಡಿಕೊಳ್ಳಬೇಕು, ಹಬ್ಬ ಇನ್ನೀತರ ದಿನಗಳಲ್ಲಿ ಗೋ ಪೂಜೆ ಮಾಡುವವರ ಅಂಗಡಿಗಳಲ್ಲಿ ವ್ಯಾಪಾರ ಮಾಡಿ ಎಂದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಅಮರೇಶ ಬ್ಯಾಳಿ, ಮಲ್ಲಿಕಾರ್ಜುನ ಎಚ್.ಕೆ., ಸರ್ವೇಶ್ವರ ರಾವ್, ಭಜರಂಗ ದಳದ ತಾಲ್ಲೂಕು ಸಂಯೋಜಕ ರಾಕೇಶ ಪಾಟೀಲ್, ಹುಸೇನಪ್ಪ ಬಾರಕೇರ್, ರವಿಕುಮಾರ ಮಾನ್ವಿ ಇತರರು ಇದ್ದರು
ಅದ್ದೂರಿ ಮೆರವಣಿಗೆ : ಛತ್ರಪತಿ ಶಿವಾಜಿ ಜಯಂತಿ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಶಿವಾಜಿ ಅವರ ಪ್ರತಿಮೆಯ ಮೆರವಣಿಗೆಯನ್ನು ಗಚ್ಚಿನಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಮತ್ತು ಚೈತ್ರ ಕುಂದಾಪುರ ಉದ್ಘಾಟಿಸಿದರು. ನೂರಾರು ಯುವಕರು ಕೆಸರಿ ಬಾವುಟದೊಂದಿಗೆ ಪಾಲ್ಗೊಂಡಿದ್ದರು. ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತಿತ್ತು.