ವಿನೂತನ ಹೈಟೇಕ್ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್

ವಿನೂತನ ಹೈಟೇಕ್ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್

e-ಸುದ್ದಿ ವರದಿ:ಇಳಕಲ್

ಬಾಗಲಕೋಟೆ ಜಿಲ್ಲೆಯಲ್ಲಿಯೇ ಮಾದರಿ ಗ್ರಾಮಪಂಚಾಯತಿಯಂತೆ ನಿರ್ಮಾಣವಾದ ಇಳಕಲ್ ತಾಲೂಕಿನ ಗೋರಬಾಳ ಗ್ರಾಮ ಪಂಚಾಯತ ನೂತನ ಕಟ್ಟಡವನ್ನು ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಜಿ ಪಾಟೀಲ್  ಉದ್ಘಾಟಿಸಿದರು.

ಇದೇ ಸಂಧರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ವೀರಭದ್ರ ಮಹಾಸ್ವಾಮಿಗಳು ಅಂಕಲಿಮಠ ಪೂಜ್ಯರು ವಹಿಸಿದ್ದರು.

ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷ ದೊಡ್ಡಬಸಪ್ಪ ಎಸ್ ಕುರಿ ಉಪಾಧ್ಯಕ್ಷ ಕವಿತಾ ಬಸವರಾಜ ಬಿಜ್ಜೂರ ಇಲಕಲ್ಲ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ,ಹುನಗುಂದ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಮತ್ತು ಪಿಡಿಓ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಸಂಘದ ರಾಜು ವಾರದ ಗ್ರಾಮ ಪಂಚಾಯಿತ ಅಭಿವೃದ್ಧಿ ಅಧಿಕಾರಿ ಅಮರೇಗೌಡ ಜಾರಡ್ಡಿ ನೂತನ ಗ್ರಾಮ ಪಂಚಾಯತಿ ಕಟ್ಟಡದ ಗುತ್ತಿಗೆದಾರರ ಸಿದ್ದು ವಸ್ತ್ರದ ಹಾಗೂ ಸರ್ವ ಸದಸ್ಯರು ಮತ್ತು ವಿವಿಧ ಗ್ರಾಮದ ಗುರು ಹಿರಿಯರು, ಯುವಕರು ತಾಯಂದಿರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!