ರಡ್ಡಿಸಿರಿ ಬ್ಯಾಂಕಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ರಡ್ಡಿಸಿರಿ ಬ್ಯಾಂಕಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

e-ಸುದ್ದಿ ಮಸ್ಕಿ

ಇಳಕಲ್ ;ನಗರದ ಎಸ್ ವಿ ಎಂ ಕಾಲೇಜ್ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಬ್ಯಾಂಕ್  ರಡ್ಡಿ ಸಮಾಜದ ರಡ್ಡಿಸಿರಿ ಬ್ಯಾಂಕಿನ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು.

ಬ್ಯಾಂಕ್ ಕಳೆದು ಐದು ವರ್ಷಗಳಿಂದ ಉತ್ತಮ ಪ್ರಗತಿ ಸಾಧಿಸಿದ್ದು ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರನ್ನ ಸರ್ವಾನುಮತದಿಂದ ಅವಿರೋಧವಾಗಿ ಅಧ್ಯಕ್ಷರಾಗಿ ಶ್ರೀಮತಿ ಶ್ರೀದೇವಿ ಅಮರೇಶ ಕರಡದಾಳ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ್ ಪಾಟೀಲ್ (ರಾಂಪುರ) ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಮಲ್ಲಿಕಾರ್ಜುನ್ ಪಾಟೀಲ್ (ರಾಂಪುರ್) ಪ್ರಾರಂಭದಲ್ಲಿ ನಮ್ಮ ಬ್ಯಾಂಕು ಸ್ವಲ್ಪ ಮೊತ್ತದಿಂದ ಪ್ರಾರಂಭವಾಗಿ ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳ ಸಹಕಾರದಿಂದ ಹಾಗೂ ಸಿಬ್ಬಂದಿಯವರ ಅಚ್ಚುಕಟ್ಟಾದ ಕೆಲಸದಿಂದಾಗಿ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಲು ಕಾರಣವಾಗಿದೆ ಎಂದು ಹೇಳಿದರು.

ಈ ಬ್ಯಾಂಕ್ ಉತ್ತಮವಾಗಿ ಪ್ರಗತಿ ಹೊಂದಲು ಈ ಮೊದಲು ಇದ್ದ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಬ್ಯಾಂಕಿನ ಶ್ರೇಯೋಭಿವೃದ್ಧಿಗಾಗಿ ಸತತ ಶ್ರಮವಹಿಸುತ್ತಿರುವ ವಿರುಪಾಕ್ಷಪ್ಪ ಮುರಾಳ ರವರ ಪ್ರಯತ್ನದ ಫಲವಾಗಿ ನಮ್ಮ ಬ್ಯಾಂಕು ಇಷ್ಟು ಬೇಗನೆ ಅಭಿವೃದ್ಧಿ ಆಗಿದೆ ಎಂದರು.

ಅಧ್ಯಕ್ಷ ಉಪಾಧ್ಯಕ್ಷ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಬ್ಯಾಂಕಿನ ಎಲ್ಲಾ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿಗಾರರು; ಶರಣಗೌಡ ಕಂದಕೂರ

 

Don`t copy text!