ಮಾಚ್೯ 8 ರಂದು ಇಳಕಲ್ ನಗರದಲ್ಲಿ ನಡೆಯುವ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಿ ;ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್…

e-ಸುದ್ದಿ ವರದಿ;ಇಳಕಲ್

ಇಳಕಲ್: ಇಲಕಲ್ಲ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ಹೋಳಿ ಹಬ್ಬದ ನಿಮಿತ್ಯ ಬಣ್ಣದ ಓಕುಳಿ ಕಾರ್ಯಕ್ರಮ ನಡೆಯುತ್ತದೆ.

ಮಾಚ್೯ 8 ರಂದು ಇಳಕಲ್ ನಗರದಲ್ಲಿ ನಡೆಯುವ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್. ತಿಳಿಸಿದ್ದಾರೆ.

ನಗರದ ಬಸವೇಶ್ವರ ಸರ್ಕಲ್ ದಿಂದ ಮುಂಜಾನೆ 9:00ಗೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

ಅಲ್ಲದೆ ಈ ಹೋಳಿ ಹಬ್ಬದಲ್ಲಿ ವಿವಿಧ ಪಂದ್ಯಗಳನ್ನು ಹಮ್ಮಿಕೊಳ್ಳಲಾಗಿದೆ, ಹೀಗಾಗಿ ತಾಲೂಕಿನ ಎಲ್ಲಾ ಯುವಕರು ತಾಯಂದಿರು ಈ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ.

Don`t copy text!