ಡಿ ಜಿ ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ದೊಡ್ಡನಗೌಡ ಜಿ ಪಾಟೀಲ್ ರ 65 ನೇ ಹುಟ್ಟು ಹಬ್ಬ ಆಚರಣೆ…
e-ಸುದ್ದಿ ಇಳಕಲ್
ಇಳಕಲ್ ನಗರದ ಶಾಸಕರ ಗೃಹ ಕಚೇರಿಯಲ್ಲಿ ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರ 65ನೇ ಹುಟ್ಟು ಹಬ್ಬದ ಅಂಗವಾಗಿ ನಗರಸಭೆ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು
ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಡಿ ಜಿ ಪಾಟೀಲ್ ಅಭಿಮಾನಿ ಬಳಗದ ಸರ್ವ ಸದಸ್ಯರು ಗೃಹ ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.
ಡಿ ಜಿ ಪಾಟೀಲರ ಸಮಸ್ತ ಅಭಿಮಾನಿ ಬಳಗದವರು ಕಚೇರಿಗೆ ಆಗಮಿಸಿ ಶಾಲು ಹಾಕಿ ಕೇಕ್ ತಿನ್ನಿಸಿ, ತಮ್ಮ ನೆಚ್ಚಿನ ಜನನಾಯಕರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ವರದಿಗಾರರು: ಶರಣಗೌಡ ಕಂದಕ ದೂರ