ಇಳಕಲ್ ನಗರ ಠಾಣೆಯಲ್ಲಿ
ಪಿ ಎಸ್ ಐ ನೇತೃತ್ವದಲ್ಲಿ ಶಾಂತಿ ಸಭೆ….
e-ಸುದ್ದಿ ಇಳಕಲ್
ಇಳಕಲ್; ನಗರ ಪೋಲಿಸ ಠಾಣೆಯಲ್ಲಿ ಪಿಎಸ್ಐ ಕೃಷ್ಣ ವೇಣಿ ನೇತೃತ್ವದಲ್ಲಿ ಹೋಳಿ ಹಬ್ಬ ಹಾಗೂ ವೀರ ಸಾವರ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮದ ನಿಮಿತ್ಯವಾಗಿ ಇಂದು ಇಲಕಲ್ಲ ನಗರ ಪೋಲಿಸ್ ಠಾಣೆಯಲ್ಲಿ ನಗರದ ಹಿರಿಯರು ಯುವಕರು ವಿವಿಧ ಸಮುದಾಯದ ಮುಖಂಡರುಗಳ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿದರು.
ಇದೇ ಸಂದರ್ಭದಲ್ಲಿ ನಗರದ ಹಿರಿಯರು ,ಯುವಕರು ಸಭೆಯಲ್ಲಿ ಮಾತನಾಡಿದರು. ಶಾಂತಿ ಸಭೆಯಲ್ಲಿ ನಗರ ಪಿಎಸ್ಐ ಕೃಷ್ಣವೇಣಿ ಮಾತನಾಡಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಸೌಹಾರ್ದ ಯುತವಾಗಿ ಆಚರಣೆ ಮಾಡಿ ಅದೇ ರೀತಿ ವೀರ ಸಾವರ್ಕರ್ ಪುತ್ತಳಿ ಅನಾವರಣ ಹಾಗೂ ಶೋಭಾಯಾತ್ರೆಯನ್ನು ಶಾಂತಿಯುತವಾಗಿ ಆಚರಿಸಲು ಕರೆ ನೀಡಿದರು.
ವರದಿಗಾರರು; ಶರಣಗೌಡ ಕಂದಕೂರ