ಯಾರಿವನು
ಅವನೆಂದರೆ ಚಂದಿರ
ಕತ್ತಲಲ್ಲಿ ದಾರಿತೋರುವ ಜ್ಞಾನದ ದೀಪದಂತೆ
ಅವನೆಂದರೆ ಮಂದಾರ
ಭಕ್ತಿಯ ಪರಿಮಳ ಸೂಸಿ ತನ್ನೆಡೆ ಸೆಳೆಯುವಂತೆ
ಅವನೆಂದರೆ ಹಂದರ
ಸುಡು ಬಿಸಿಲಲ್ಲಿ ತಂಪಾದ ನೆರಳಿನಂತೆ
ಅವನೆಂದರೆ ಸುಂದರ
ಮನದ ವಿಕಾರ ತೋರೆದ ಚೆಲುವನಂತೆ
ಅವನೆಂದರೆ ಮಂದಿರ
ಆತ್ಮದ ಅರಿವಿನ ಅನುಭೂತಿಯಂತೆ.
ಅವನೆಂದರೆ ನಿಸ್ಸಾರ
ಭವಬಂಧನದಿ ಭವಿ ಮುಕ್ತಗೊಳಿಸುವಂತೆ
ಅವನೆಂದರೆ ಚಮತ್ಕಾರ
ತ್ರಾಟಕದಿ ವಿರಾಡ್ರುಪ ತೋರಿದಂತೆ.
ಅವನೆಂದರೆ ಅಭಿಸಾರ
ಅವನಲ್ಲಿ ಬೆರೆತು ಅವನೇ ಆಗುವಂತೆ.
ಯಾರಿವನು ಒಲವ ಚೆಲುವಾ
ನನ್ನೊಳಗಿನ ಚೇತನವ ಚಿಮ್ಮಿಸಿದವನು
ಮೌನದಿ ಮನಸೆಳೆದ ಮಂತ್ರಪುರುಷನಿವನು
ಲಿಂಗವಾಗಿ ಅಂಗದೋಳು ಸಮರಸದಿ ಬೆರೆತವನು
–ಸವಿತಾ ಮಾಟೂರು ಇಳಕಲ್